ಬಾರ್ ಆಂಡ್ ರೆಸ್ಟೋರೆಂಟ್ ಧರಣಿ ಸತ್ಯಾಗ್ರಹ 4ನೇ ದಿನಕ್ಕೆ ಮುಂದು ವರೆದಿದ್ದು..!!
ಧರಣಿ ಸತ್ಯಾಗ್ರಹ ನಿರತರನ್ನು ಭೇಟಿಗೆ ಬಾರದ ಶಾಸಕ ಮಹೇಂದ್ರ ತಮ್ಮಣ್ಣವರ; ಶಾಸಕರ ನಡೆಯಿಂದ ಬೇಸತ್ತ ಧರಣಿ ನೀರತರು…
ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ಗ್ರಾಮ ಪಂಚಾಯಿತಿ ಕಾರ್ಯಾಲಯದ ಸಭಾಭವನದ ಮುಂದೆ ಕುಳಿತ ಸಾರ್ವಜನಿಕರು ಗ್ರಾಮದಲ್ಲಿ ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ಗೆ ಪರವಾನಿಗೆ ನೀಡಿದ ಗ್ರಾಮ ಪಂಚಾಯತಿಯವರ ಕ್ರಮವನ್ನು ಖಂಡಿಸಿ ಇದೆ ಆಗಸ್ಟ್ 7ರಿಂದ ಅನಿರ್ಧಷ್ಠವಧಿ ಧರಣಿ ಸತ್ಯಾಗ್ರಹವು 5ನೇ ದಿನಕ್ಕೆ ಮುಂದುವರೆದಿದ್ದು. ತಹಸಿಲ್ದಾರ್ ಸುರೇಶ ಮುಂಜೆ, ತಾಪಂ ಇಒ ಅರುಣ ಮಾಚಕನೂರ ಸೇರಿದಂತೆ ತಾಲೂಕ ಆಡಳಿತ, ರೈತಪರ ಸಂಘಟನೆ, ದಲಿತ ಪರ ಸಂಘಟನೆ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಿರತ ಸ್ಥಳಕ್ಕೆ ಬಂದು ಗ್ರಾಮಸ್ಥರನ್ನು ಭೇಟಿ ಮಾಡಿ ಧರಣಿ ನಿರತರಿಗೆ ಆತ್ಮಸ್ಥೈರ್ಯ ತುಂಬಿ, ನಾವು ನಿಮ್ಮೊಂದಿಗೆ ಇದ್ದೇವೆ, ನೀವು ಹೆದರಬೇಡಿರಿ ಎಂದು ಬೆಂಬಲ ಸೂಚಿಸಿದ್ದಾರೆ.
ಆದರೆ ಕುಡಚಿ ಮತಕ್ಷೇತ್ರದ ಜನಪ್ರಿಯ ಶಾಸಕ ಮಹೇಂದ್ರ ತಮ್ಮಣ್ಣವರ ಅವರು ಗ್ರಾಮಕ್ಕೆ ಭೇಟಿ ನೀಡಿ ಧರಣಿ ಸತ್ಯಾಗ್ರಹ ನಿರತ ಗ್ರಾಮಸ್ಥರಿಗೆ ಸಾಂತ್ವನ ಹೇಳುವುದಕ್ಕೆ ಬಂದಿಲ್ಲವೆಂದು ಧರಣಿ ನಿರತರು ಅಸಮಾಧಾನ ಹೊರಹಾಕಿದ್ದಾರೆ. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ ಅಧಿಕಾರಿಗಳ ಆದೇಶದಂತೆ ಬರುವ ಆಗಸ್ಟ್ 12ರಂದು ಗ್ರಾಂಪಂ ಕಾರ್ಯಾಲಯದಲ್ಲಿ ಸಾಮಾನ್ಯಸಭೆ ಕರೆದು ಮಹತ್ವದ ವಿಷಯ ಚರ್ಚೆಯಾಗಲಿದ್ದು, ಧರಣಿ ಸತ್ಯಾಗ್ರಹ ನಿರತರ ಬೇಡಿಕೆ ಈಡೇರದಿದ್ದರೆ ಇದೇ 12ರಿಂದ ಉಪವಾಸ ಸತ್ಯಾಗ್ರಹ ಮಾಡಲಾಗುವುದೆಂದು ಧರಣಿ ಸತ್ಯಾಗ್ರಹ ನಿರತ ಗ್ರಾಮಸ್ಥರು ಆಗಲೇ ಬರುವ 12ರಂದು ಸೋಮವಾರ ದಿಂದ ಉಪವಾಸ ಸತ್ಯಾಗ್ರಹ ಮಾಡಲಾವುದು ಎಂದು ಘೋಷಣೆ ಮಾಡಿದ್ದಾರೆ.
ಮಾನ್ಯ ಶಾಸಕ ಮಹೇಂದ್ರ ತಮ್ಮಣ್ಣವರವರು ಸಾಯಿ ಬಾರ್ ಆಂಡ್ ರೆಸ್ಟೋರೆಂಟ್ ಗೆ ನೀಡಿದ ಪರವಾನಿಗೆಯ ವಿಷಯವಾಗಿ ಧರಣಿ ಸತ್ಯಾಗ್ರಹ ನಿರತ ಕಾರ್ಯಕರ್ತರನ್ನ ಹಾಗೂ ಗ್ರಾಮಸ್ಥರನ್ನು ಕರೆದು, ಗ್ರಾಮಪಂ ಜನಪ್ರತಿನಿಧಿಗಳನ್ನು, ಅಧಿಕಾರಿಗಳನ್ನು ಹಾಗೂ ಗ್ರಾಮಸ್ಥರ ಮನವಲಿಸಿ ಹೊಂದಾಣಿಕೆ ಮಾಡಿ ಈ ಹೋರಾಟಕ್ಕೆ ಇತಿಶ್ರೀ ಹಾಡುವರೆಂದು ಗ್ರಾಮಸ್ಥರು ಬಕಪಕ್ಷಿಯಂತೆ ಕಾಯುತ್ತಿದ್ದಾರೆ.
ಈ ಸಂದರ್ಭದಲ್ಲಿ ಬರಮಪ್ಪ ಮಾನಶೆಟ್ಟಿ, ಕರ್ನಾಟಕ ದಲಿತ ಸಂಘರ್ಷ ರಾಜ್ಯ ಸಮಿತಿ ಸದಸ್ಯ ರಾಘವೇಂದ್ರ ಸಿಂಪಿ, ಪಿಕೆಪಿಎಸ್ ಬ್ಯಾಂಕ್ ನಿರ್ದೇಶಕ ಶ್ರೀಶೈಲ ಮರಡಿ, ಬರಮಪ್ಪ ಜೋಗಿ, ಹುಲೆಪ್ಪ ತೇಗೂರ, ಬರಮಪ್ಪ ನಿಂಗನೂರ, ಸಂಗಪ್ಪ ತುಪ್ಪದ ಅಣ್ಣಾಸಾಬಗೌಡ ಪಾಟೀಲ, ಈರಪ್ಪ ಮೂಡಲಗಿ, ಅಸ್ಲಂ ಬಿರಾದಾರ, ಶಿರಿಯಾಳ ಮಾದರ, ಆಶಾ ಕಾರ್ಯಕರ್ತೆ ಶಾನವ್ವ ಹಿರಾಬಾಳೆ, ಮಾನಂದ ತುಪ್ಪದ, ಅಲ್ಲಪ್ಪ ನಿಂಗನೂರ, ಹೆಡ್ ಕಾನ್ಸ್ಟೇಬಲ್ ಸಾಗರ ಕಾಂಬಳೆ, ಪ್ರಕಾಶ ಪಾಟೀಲ, ಶ್ರೀಶೈಲ ಗೋಡಿ, ಶಾಭು ಮಾನಶೆಟ್ಟಿ, ಬಾಹುರಾಜ ತೇಗೂರ, ಉತ್ತಮ ಕರಜಗಿ, ಅಭಿಷೇಕ ತುಪ್ಪದ,
ಪ್ರವೀಣ ಸಂತಿ, ಯಲ್ಲಪ್ಪ ಜಾನಮಟ್ಟಿ, ಶ್ರೀಶೈಲ ಮಲ್ಲಣ್ಣವರ ಇತರರು ಇದ್ದರು.
ಬಾಕ್ಸ್ ಲೈನ್ ===
“ಪಾಲಬಾವಿ ಗ್ರಾಮ ಪಂಚಾಯಿತಿಯ ಚುನಾಯಿತ ಜನಪ್ರತಿನಿಧಿಗಳು ಹಣ ಪಡೆದು ಸಾಯಿ ಬಾರ್ ಮತ್ತು ರೆಸ್ಟೋರೆಂಟ್ ಗೆ ಪರವಾನಿಗೆ ನೀಡಿದ್ದಾರೆಂದು ಕೇಳಿ ಬರುತ್ತಿರುವ ಆರೋಪಗಳು ಶುದ್ಧ ಸುಳ್ಳು..! ಒಂದಿಬ್ಬರು ಸದಸ್ಯರನ್ನು ಹೊರತುಪಡಿಸಿ….. ಉಳಿದ ಯಾವ ಸದಸ್ಯರು ಯಾರಿಂದಲೂ ಹಣ ಪಡೆದಿರುವುದಿಲ್ಲ. ನಮ್ಮ ಗ್ರಾಮ ಪಂಚಾಯಿತ್ ಸದಸ್ಯರು ಯಾವಾಗಲೂ ಗ್ರಾಮಸ್ಥರ, ಜನರ ಪರವಾಗಿದ್ದು, ಯಾರದೋ ತಪ್ಪು ಮಾರ್ಗದರ್ಶನದಲ್ಲಿ ನೀಡಿರುವ ಬಾರ್ ಲೈಸೆನ್ಸ್ (ಪರವಾನಿಗೆ) ಯನ್ನು ರದ್ದುಪಡಿಸಿ ಜನರ ಹೋರಾಟದ ಪರವಾಗಿ ನಿಲ್ಲುತ್ತಾರೆಂದು ಸಂಪೂರ್ಣವಾದ ವಿಶ್ವಾಸ ನನಗಿದೆ”
===} ಪ್ರಭಾಕರ ಕುರಬೆಟ್ಟಿ






