ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯ

ಬಾರ್ ಆಂಡ್ ರೆಸ್ಟೋರೆಂಟ್ ಬೇಡ ಧರಣಿ ನಿರತ ಹುಲೆಪ್ಪ ತೇಗೂರ ಅರೋಗ್ಯದಲ್ಲಿ ಏರುಪೇರು ಆಸ್ಪತ್ರೆಯಲ್ಲಿ ಚಿಕಿತ್ಸೆ…!!

ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹುಲೆಪ್ಪ ತೇಗೂರ ಅವರ ಆರೋಗ್ಯ ವಿಚಾರಿಸುತ್ತಿರುವ ತಾಪಂ ಕಾರ್ಯನಿರ್ವಕ ಅರುಣ ಮಾಚಕನೂರ…

ಪ್ರಕೃತಿ ಬೆಳಗಾವಿ ಸುದ್ದಿ : ಪಾಲಬಾವಿ : ಗ್ರಾಮದ ಪಂಚಾಯತ್ ಕಾರ್ಯಾಲಯದ ಸಭಾಭವನದಲ್ಲಿ ಕಳೆದ 4 ದಿನಗಳಿಂದ ಸಾಯಿ ಬಾರ್ ರೆಸ್ಟೋರೆಂಟ್ ತೆರೆಯಲು ಪರವಾನಿಗೆ ನೀಡಿದ್ದನ್ನು ಖಂಡಿಸಿ ಆಗಸ್ಟ್ 7ರಿಂದ ಧರಣಿ ಸತ್ಯಾಗ್ರಹ ನಿರತ 3ನೇ ದಿನದಲ್ಲಿ ಹೋರಾಟಗಾರ ಮುಖ್ಯಸ್ಥ ಹುಲೆಪ್ಪ ತೇಗೂರ ಅವರ ಆರೋಗ್ಯ ಸ್ಥಿತಿಯು ಹದಗೆಟ್ಟಿದ್ದು, ಬಿಪಿಲೋ ಆಗಿದ್ದು ಕೆಳಗೆ ಬಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ ತಕ್ಷಣ ಸ್ಥಳೀಯರು ಸಮಯಪ್ರಜ್ಞೆಯಿಂದ ದೊಡ್ಡ ಅಪಾಯವನ್ನು ತಪ್ಪಿಸಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಹೊಲ ಅಪ್ಪನನ್ನು ತಕ್ಷಣವೇ ಸ್ಥಳೀಯರು ಕಾರ್ ವ್ಯಾನ್ ಮೂಲಕ ಹಾರೂಗೇರಿ ಖಾಸಗಿ ಆಸ್ಪತ್ರೆಗೆ ತಂದು ಚಿಕಿತ್ಸೆ ಕೊಡಿಸಿದ್ದಾರೆ.

ಹುಲೆಪ್ಪ ತೇಗೂರ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಧರಣಿ ಸತ್ಯಾಗ್ರಹ ನಿರತ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ. ಗ್ರಾಮದ ಒಳಿತಿಗಾಗಿ ಪರವಾಗಿ ನಮ್ಮ ಪ್ರಾಣವನ್ನು ಕೊಟ್ಟೆವು ಆದರೇ ನಾವು ಹೋರಾಟವನ್ನು ಬಿಡುವುದಿಲ್ಲವೆಂದು ಆಸ್ಪತ್ರೆಯಿಂದಲೇ ಹುಲೆಪ್ಪ ತೇಗೂರ ಸಂದೇಶ ಕಳುಹಿಸಿದ್ದಾರೆ.

ಧರಣಿ ಸತ್ಯಾಗ್ರಹ ನಿರತ ಹುಲೆಪ್ಪ ತೇಗೂರ ಅವರು ಹಾರೂಗೇರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾಹಿತಿ ತಿಳಿದು ತಾಲೂಕು ಪಂಚಾಯಿತ್ ಕಾರ್ಯನಿರ್ವಾಹಕ ಅಧಿಕಾರಿ ಅರುಣ ಮಾಚಕನೂರ, ಪಿಡಿಒ ಶ್ರೀಕಾಂತ ಪಾಟೀಲ, ಹಿಡಕಲ್ಲ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯಸ್ಥ ಸತೀಶ ಜಾಧವ ಇತರರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ಈ ಸಂಧರ್ಭದಲ್ಲಿ ಈ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುರು ಮರಡಿ, ಗ್ರಾಪಂ ಸದಸ್ಯ ಬಸಪ್ಪ ತೇಗೂರ, ಶಿರಿಯಾಳ ಮಾದರ, ಮಾಜಿ ಗ್ರಾಪಂ ಅಧ್ಯಕ್ಷ ಸಂಜು ತೇಗೂರ, ಸುಭಾಷ ಕಾಡಶೆಟ್ಟಿ, ಶ್ರೀಶೈಲ ಗೋಡಿ, ಅಣ್ಣಾಸಾಬಗೌಡ ಪಾಟೀಲ, ಬರಮಪ್ಪ ನಿಂಗನೂರ, ಬಾಹುರಾಜ ತೇಗೂರ, ಬರಮಪ್ಪ ಮಾನಶೆಟ್ಟಿ, ಬರಮಪ್ಪ ಮಾನಶೆಟ್ಟಿ, ಅಸ್ಲಮ್ ಬಿರಾದಾರ, ಯಲ್ಲಪ್ಪ ಜಾನಮಟ್ಟಿ, ಪ್ರಕಾಶ ಪಾಟೀಲ, ಶ್ರೀಶೈಲ ಗೋಡಿ, ಶ್ರೀಶೈಲ ನಾರಗೊಂಡ, ಶ್ರೀಶೈಲ ಮಲ್ಲಣ್ಣವರ ಇತರರು ಇದ್ದರು.*************

Back to top button