*ವಿವಿಧೆಡೆ ಗಣೇಶ ಮೂರ್ತಿ ದರ್ಶನ ಪಡೆದು ಪೂಜೆ ಸಲ್ಲಿಸಿದ ಲಕ್ಷ್ಮೀ ಹೆಬ್ಬಾಳಕರ್*

*ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಣೇಶೋತ್ಸವದ ಸಂಭ್ರಮ*
ಬೆಳಗಾವಿ : ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳು ಹಾಗೂ ಬಡಾವಣೆಗಳಲ್ಲಿ ಆಯೋಜಿಸಲಾಗಿರುವ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಭೇಟಿ ನೀಡಿ, ಶ್ರೀ ಗಣೇಶನ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಅಂಬೇವಾಡಿಯಲ್ಲಿ ಗಣೇಶೋತ್ಸವದ ಸಂಭ್ರಮ
ಅಂಬೇವಾಡಿ ಗ್ರಾಮದಲ್ಲಿ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳಿಗೆ ಭೇಟಿ ನೀಡಿದ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಘ್ನ ವಿನಾಶಕ ಶ್ರೀ ಗಣೇಶನ ದರ್ಶನ ಪಡೆದು, ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ ಹಾಗೂ ಸರ್ವರ ಒಳಿತಿಗಾಗಿ ಪ್ರಾರ್ಥಿಸಿದರು.
ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಅವರು, ಶಾಲಾ ಮಕ್ಕಳಿಂದ ಮೂಡಿಬಂದ ವಿವಿಧ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಮಕ್ಕಳ ಪ್ರತಿಭೆಯನ್ನು ಮೆಚ್ಚಿ, ಅವರನ್ನು ಪ್ರೋತ್ಸಾಹಿಸಿದರು.
ಕಂಗ್ರಾಳಿ ಬಿಕೆ, ಗಣೇಶಪುರ ಹಾಗೂ ಬಿಜಗರಣಿಯಲ್ಲೂ ದರ್ಶನ
ಕಂಗ್ರಾಳಿ ಬಿಕೆ ಗ್ರಾಮದ ಶ್ರೀ ಗಣೇಶ್ ಲೇಔಟ್ನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಡಳಿಯವರು ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಯ ದರ್ಶನ ಪಡೆದ ಲಕ್ಷ್ಮೀ ಹೆಬ್ಬಾಳಕರ್ ಅವರು ವಿಶೇಷ ಪೂಜೆ ಸಲ್ಲಿಸಿ, ಎಲ್ಲರಿಗೂ ಶುಭ ಹಾರೈಸಿದರು.
ಗಣೇಶಪುರದ ಶ್ರೀ ಲಕ್ಷ್ಮೀ ನಗರದ ನೀಲಕಂಠ ವಿಹಾರದಲ್ಲಿರುವ ಶ್ರೀ ಗಣೇಶೋತ್ಸವ ಮಂಡಳಿಗೆ ಭೇಟಿ ನೀಡಿದ ಅವರು, ಗಣೇಶ ಮೂರ್ತಿಯ ದರ್ಶನ ಪಡೆದು ಕ್ಷೇತ್ರದ ಜನತೆಯ ಒಳಿತಿಗಾಗಿ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾರ್ಥಿಸಿದರು.
ಬಿಜಗರಣಿ ಗ್ರಾಮದಲ್ಲಿಯೂ ಶ್ರೀ ವಿಕಾಸ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ ವಿಘ್ನ ವಿನಾಶಕ ಶ್ರೀ ಗಣೇಶನ ದರ್ಶನ ಪಡೆದು, ಆಶೀರ್ವಾದ ಕೋರಿದ ಅವರು, ಗ್ರಾಮಸ್ಥರಿಗೆ ಗಣೇಶೋತ್ಸವದ ಶುಭಾಶಯಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಕಾಡಾ ಅಧ್ಯಕ್ಷ ಯುವರಾಜ ಕದಂ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಾಳು ದೇಸೂರಕರ್, ಜಯವಂತ ಬಾಳೇಕುಂದ್ರಿ, ಲಕ್ಷ್ಮೀ ಯಳ್ಳೂರಕರ್, ಪುಂಡಲೀಕ್ ಬಾಂದುರ್ಗೆ, ಶಿವಾಜಿ ರಕ್ಷೆ, ಅಮುಲ್ ಭಾತ್ಕಂಡೆ, ಬಾಹುರಾವ್ ತುಡವೇಕರ್, ಯೋಗೇಶ್ ರಕ್ಷೆ, ವಿಕ್ರಂ ತರಳೆ, ಶಿವಾಜಿ ಕಾಂಬಳೆ, ಮಲ್ಲಪ್ಪ ತರಳೆ, ದತ್ತಾ ಠಾಕ್ರೆ, ಮೋಹನ್ ಸಾಂಬ್ರೇಕರ್, ಎಸ್. ಪಾಟೀಲ್, ಮಹಾದೇವ್ ಪೊದಾರ್, ಚಂದ್ರಶೇಖರ್ ಶಿರಹಟ್ಟಿ, ಚಂದ್ರಕಾಂತ ಕಡಗೆ, ಸಾಗರ್ ಗೊಡಸೆ ಸೇರಿದಂತೆ ಸ್ಥಳೀಯ ಮುಖಂಡರು, ಕಾರ್ಯಕರ್ತರು, ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.*****************************************











