ಪ್ರಕೃತಿ ಬೆಳಗಾವಿ

*ನುಡಿದಂತೆ ನಡೆದ ಯಮಕನಮರಡಿ ಪೊಲೀಸ್ ಠಾಣೆಯ ಜಾವೀದ ಮುಷಾಪುರಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಜಿಲ್ಲೆ ಯಮಕನಮರಡಿ ಪೋಲಿಸ್ ಠಾಣಾಯ ಆವರಣದಲ್ಲಿ ಗಣೇಶ ಹಬ್ಬದ ನಿಮಿತ್ಯ ಶಾಂತಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯಮಕನಮರಡಿ ಪೊಲೀಸ್ ಠಾಣೆ CPI ಜಾವೀದ್ ಮುಷಾಪುರಿ ಮಾತನಾಡಿ ಸನ 2025 ರಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿದ ಸಾರ್ವಜನಿಕ ಗಣೇಶೋತ್ಸವ ಮಂಡಳಿಗೆ 5000 ರೂಪಾಯಿ ನಗದು ಬಹುಮಾನ ಹಾಗೂ ಪ್ರಶಸ್ತಿಯನ್ನು ನೀಡಿದರು.

ಹಾಗೂ ಈ ವರ್ಷ ನಮ್ಮ ಎಲ್ಲಾ  ಕುಟುಂಬದವರು ಯಾವುದೇ DJ ಸೌಂಡ್ ಸಿಸ್ಟಮ್ ಬಳಸದೆ ಪುರಾತನ ಕಾಲದ ವಾದ್ಯಗಳನ್ನು ಬಳಸಿ ಪರಿಸರ ಮಾಲಿನ್ಯವನ್ನು ನಿಯಂತ್ರಿಸಿ ಮತ್ತು ಯಾವುದೇ ಐತಕರ ಘಟನೆ ಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರಲ್ಲಿ ಮನವರಿಕೆ ಮಾಡಿಕೊಂಡರು.

ಹಾಗೂ ವಿಷೇಶವಾಗಿ ಸನ 2026 ಸಾಲಿನ SSLC ಪರೀಕ್ಷೆಯಲ್ಲಿ 625 ಅಂಕಗಳನ್ನು ಪಡೆದ ಯಮಕನಮರಡಿ ಮತಕ್ಷೇತ್ರದ ವಿದ್ಯಾರ್ಥಿಗಳಿಗೆ ರೂ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.**********************************

Leave a Reply

Your email address will not be published. Required fields are marked *

Back to top button