ಪ್ರಕೃತಿ ಬೆಳಗಾವಿ
*ಬೆಳಗಾವಿಗೆ ನೂತನ ಪೊಲೀಸ್ ಕಮಿಷನರ್ ; ಭೂಷಣ್ ಬೋರಸೆ ವರ್ಗಾವಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರ ಪೊಲೀಸ್ ಆಯುಕ್ತರಾಗಿದ್ದ ಭೂಷಣ್ ಗುಲಾಬರಾವ ಬೋರಸೆ ಅವರು ವರ್ಗಾವಣೆಗೊಂಡಿದ್ದು ಇವರ ಸ್ಥಾನಕ್ಕೆ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ಆಯ್ಕೆ ಮಾಡಿ ಸರಕಾರ ಆದೇಶಿಸಿಸಿದೆ.
ಭೂಷನ್ ಗುಲಾಬರಾವ್ ಅವರು ಬೆಳಗಾವಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದರು.
ಗಣೇಶ ಚತುರ್ಥಿ, ಕನ್ನಡ ರಾಜ್ಯೋತ್ಸವ, ಶಿವಾಜಿ ಜಯಂತಿ ಸೇರಿದಂತೆ ಮಹತ್ವದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವ ಚಾಕಚಕ್ಯತೆ ಇವರಲ್ಲಿತ್ತು.
ಸಧ್ಯ ಇವರ ಸ್ಥಾನಕ್ಕೆ 2012 ರ ಬ್ಯಾಚಿನ IPS ಅಧಿಕಾರಿ ನಿಕ್ಕಂ ಪ್ರಕಾಶ್ ಅಮೃತ್ ಅವರನ್ನು ನೇಮಕ ಮಾಡಲಾಗಿದೆ.********************************






