ಪ್ರಕೃತಿ ಬೆಳಗಾವಿ

*ಹೊಲದಲ್ಲಿ ಗಾಂಜಾ ಬೆಳೆದಿದ್ದ ವ್ಯಕ್ತಿಯ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ತಾಲೂಕಿನ ಬೆಣಚಿನಮರಡಿ ಗ್ರಾಮದ ಹೊಲದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಅವನ್ನಾ ಸಿದ್ದಪ್ಪ ತಪಶಿ ಬಂಧಿತ ಆರೋಪಿಯಾಗಿದ್ದು, ಖಚಿತ ಮಾಹಿತಿ ಆಧರಿಸಿ ಎಸ್.ಪಿ ಬೆಳಗಾವಿ, ಹೆಚ್ಚುವರಿ ಎಸ್.ಪಿ. ಬೆಳಗಾವಿ, ಡಿ.ವಾಯ್.ಎಸ್.ಪಿ ಗೋಕಾಕ ಹಾಗೂ ಸಿಪಿಐ ಗೋಕಾಕ ಇವರ ಮಾರ್ಗದರ್ಶನದಲ್ಲಿ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ಐ ಕೆ.ವಾಲಿಕರ ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಹೋಲದಲ್ಲಿ ಗಾಂಜಾ ಗಿಡಗಳನ್ನು ಬೆಳೆದಿರುವುದು ಪತ್ತೆಯಾಗಿದ್ದು,ಬಳಿಕ ಆರೋಪಿತನಿಂದ ಸುಮಾರು 13 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಘಟನೆ ಕುರಿತು ಗೋಕಾಕ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ದಾಳಿಯಲ್ಲಿ ಗ್ರಾಮೀಣ ಠಾಣೆಯ ಸಿಬ್ಬಂದಿ ಬಿ.ವಿ‌.ನಿರ್ಲಿ, ಸಿ.ಜೆ.ಸಣ್ಣಕ್ಕಿ, ಎಂ.ವಾಯ್.ಪಡದಲ್ಲಿ, ಎನ್.ಜಿ.ದುರದುಂಡಿ, ಎಚ್.ಕೆ.ಮಲ್ಲಾಡದವರ, ವಿ.ಬಿ.ಖೋತ, ಎಚ್. ಡಿ.ಗೌಡಿ ಭಾಗವಹಿಸಿದ್ದರು.*******************************

Leave a Reply

Your email address will not be published. Required fields are marked *

Back to top button