ಪ್ರಕೃತಿ ಬೆಳಗಾವಿ

*ಮಾನ್ಯ ಸಚಿವರಾದ ಸತೀಶ ಜಾರಕಿಹೊಳಿ ಅವರಿಂದ ವಿನೂತನ “ಚೆಸ್ ಪಾರ್ಕ್” ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಸರ್ದಾರ್ ಪ್ರೌಢಶಾಲೆಯ ಆವರಣದಲ್ಲಿ ಜಿಲ್ಲಾ ಪಂಚಾಯತ ಹಾಗೂ ಸ್ಥಳೀಯ ಶಾಸಕರ ಅನುದಾನದಲ್ಲಿ ನಿರ್ಮಿಸಲಾದ ವಿನೂತನವಾದ “ಚೆಸ್ ಪಾರ್ಕ್” ನ್ನು ಮಾನ್ಯ ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ಅವರು ಶನಿವಾರ ಉದ್ಘಾಟಿಸಿದರು.

ಮಾನ್ಯ ಸಚಿವರು ವಿದ್ಯಾರ್ಥಿಗಳೊಂದಿಗೆ ಚೆಸ್ ಆಡುವ ಮೂಲಕ ಗಮನಸೆಳೆದರು. ಮಾನ್ಯ ಶಾಸಕರಾದ ಶ್ರೀ ಆಸೀಫ್ (ರಾಜು) ಸೇಠ್ ಹಾಗೂ ಮಾನ್ಯ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ ಅವರೊಂದಿಗೆ ಕೇರಮ್ ಬೋರ್ಡ್ ಕೂಡ ಆಡುವ ಮೂಲಕ ಕೆಲಹೊತ್ತು ಕಳೆದರು. ಚೆಸ್ ಪಾರ್ಕ್ ವಿಶೇಷತೆ ಹಾಗೂ ನಿರ್ವಹಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಮಾನ್ಯ ಶಾಸಕರಾದ ಶ್ರೀ ಆಸೀಫ್ (ರಾಜು) ಸೇಠ್, ಮಾನ್ಯ ಬುಡಾ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ, ಮಾನ್ಯ ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ರಾಹುಲ್ ಶಿಂಧೆ, ಮಾನ್ಯ ನಗರ ಪೊಲೀಸ್ ಆಯುಕ್ತರಾದ ಶ್ರೀ ಭೂಷಣ ಬೋರಸೆ, ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಶ್ರೀ ಕೆ.ರಾಮರಾಜನ್, ಡಿಡಿಪಿಐ ಶ್ರೀಮತಿ ಲೀಲಾವತಿ ಹಿರೇಮಠ ಸೇರಿ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.**********************************

Leave a Reply

Your email address will not be published. Required fields are marked *

Back to top button