*ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ (BCCI)ಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.
2026-27ನೇ ಸಾಲಿನ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಸ್ವಪ್ನಿಲ್ ಶಾ ಆಯ್ಕೆಯಾಗಿದ್ದಾರೆ. ಉದಯ ಜೋಶಿ ಹಿರಿಯ ಉಪಾಧ್ಯಕ್ಷರಾಗಿ, ರಾಜೇಂದ್ರ ಮುತಗೆಕರ್ ದ್ವಿತೀಯ ಉಪಾಧ್ಯಕ್ಷರಾಗಿ, ಮನೋಜಕುಮಾರ್ ಎನ್. ಮತ್ತಿಕೊಪ್ಪ ಗೌರವ ಕಾರ್ಯದರ್ಶಿಯಾಗಿ, ವಿನಿತ್ ಹರಕುಣಿ ಜಂಟಿ ಗೌರವ ಕಾರ್ಯದರ್ಶಿಯಾಗಿ ಹಾಗೂ ರಮೇಶ್ ಲದ್ದಡ್ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.
ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಹಾಗೂ ನಿರ್ಗಮಿತ ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ಅವರ ಉಪಸ್ಥಿತಿಯಲ್ಲಿ ನಡೆದ ನೂತನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
2026-27ರ ಆಡಳಿತ ಮಂಡಳಿ ಸದಸ್ಯರು-
ವ್ಯಾಪಾರ ವಲಯ (ಆಜೀವ ಸದಸ್ಯರು/ಪೋಷಕರು): ಸಂಜೀವ್ ಕತ್ತಿಶೆಟ್ಟಿ, ರೋಹಿತ್ ಎಸ್. ಕಪಾಡಿಯಾ, ವಿಕ್ರಂ ಜೈನ್, ಪ್ರಶಾಂತ್ ಕಳ್ಳಿಮನಿ, ಅಪ್ಪಾಸಾಹೇಬ್ ಗುರವ್, ಸಂಜಯ್ ಪೋದ್ದಾರ್, ವಿಜಯ್ ದರಗಶೆಟ್ಟಿ, ಸಚಿನ್ ಹಂಗಿರ್ಗೇಕರ್, ವೈಭವ್ ವೆರ್ಣೇಕರ, ಎಂ.ಕೆ. ಹೆಗಡೆ, ನಿತಿನ್ ಪೊರ್ವಾಲ್.
ವಾರ್ಷಿಕ ಸದಸ್ಯ: ಸುಧೀರ್ ಡಿ. ಚೌಗುಲೆ.
ಕೈಗಾರಿಕಾ ವಲಯ (ಆಜೀವ ಸದಸ್ಯರು/ಪೋಷಕರು): ಸಚಿನ್ ಸಬ್ನಿಸ್, ಸತೀಶ್ ಕುಲಕರ್ಣಿ, ರಾಜೇಶ್ ಮುಚಂಡಿಕರ್, ಅಶೋಕ್ ಕೋಳಿ, ಆನಂದ ದೇಸಾಯಿ, ಸಂದೀಪ್ ಬಾಗೇವಾಡಿ ಹಾಗೂ ದಯಾನಂದ ನೇತಲ್ಕರ್. ವಾರ್ಷಿಕ ಸದಸ್ಯ: ಬಸವರಾಜ್ ರಾಂಪುರೆ.
ಇದಕ್ಕೂ ಮೊದಲು 2025-26ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಿತು. ನಿರ್ಗಮಿತ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು.************************************






