ಪ್ರಕೃತಿ ಬೆಳಗಾವಿ

*ಸಾಧಕ BLOಗಳ ಮನೆಗೆ ತೆರಳಿ ಗೌರವಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್*

*ಎಸ್.ಐ.ಆರ್. ನೂರಕ್ಕೆ ನೂರರಷ್ಟು ಸಾಧನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕಾರ್ಯವನ್ನು ಪಾಲಿಕೆ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಿಕ್ಷಕರು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ ಎಂದು

ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು.
ಎಸ್ ಐ ಆರ್ ಕಾರ್ಯದಲ್ಲಿ ಶೇ.ನೂರರಷ್ಟು ಪ್ರಗತಿ ಸಾಧಿಸಿರುವ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ, ಸತೀಶ ಢವಳೆ ಅವರ ಶಹಾಪೂರ ಬಸವಣ್ಣ ಗಲ್ಲಿಯ ಮನೆಗೆ ಗುರುವಾರ ಖುದ್ದು ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಢವಳೆ ಹಾಗೂ ಇತರ ಸಾಧಕ ಬಿಎಲ್ಓ ಗಳನ್ನು ಸನ್ಮಾನಿಸಿ ಮಾತನಾಡಿದರು.
ಈಗಾಗಲೇ ನಾನು ಮಾತು ಕೊಟ್ಟಿರುವಂತೆ ಸಾಧಕ ಬಿಎಲ್ಓ ಗಳ ಮನೆಗೇ ಬಂದು ಸನ್ಮಾನಿಸುತ್ತಿರುವುದು ಸಂತಸ ತಂದಿದೆ.

ತಮ್ಮ ಇಲಾಖೆಗಳ ದೈನಂದಿನ ಕರ್ತವ್ಯಗಳ ಕಾರ್ಯಬಾಹುಳ್ಯದ ಮಧ್ಯದಲ್ಲಿಯೇ ಮಳೆಯನ್ನೂ ಸಹ ಲೆಕ್ಕಿಸದೆ ಚುರುಕಾಗಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿ ಹಾಗೂ ಶಿಕ್ಷಕರ ಕಾರ್ಯ ಹಾಗೂ ಮೇಲಾಧಿಕಾರಿಗಳು ಸಿಬ್ಬಂದಿ ನಡುವಿನ ಸಮನ್ವಯತೆ ಜಿಲ್ಲೆಗೆ ಮಾದರಿಯಾಗಿದೆ. ಇದೇ ಕ್ರಮವನ್ನು ಎಲ್ಲರೂ ಅನುಸರಿಸಿ ನಿಗದಿತ ಅವಧಿಯಲ್ಲಿ ಎಸ್ಐಆರ್ ಪ್ರಕ್ರಿಯೆ ಮುಗಿಸಿ ರಾಜ್ಯದಲ್ಲಿ ಜಿಲ್ಲೆಗೆ ಶ್ರೇಷ್ಠ ಸ್ಥಾನ ತರಬೇಕೆಂದು ಹೇಳಿದರು.

ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ, ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರ ಸ.ನೋಂದಣಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಮಾತನಾಡಿ, ಸಭೆಯೊಂದರಲ್ಲಿ ಆಶ್ವಾಸನೆ ನೀಡಿರುವಂತೆ ಸಾಧಕ ಬಿಎಲ್ಓ ಮನೆಗೆ ಖುದ್ದು ಡಿಸಿ ಅವರೇ ಆಗಮಿಸಿ ಪ್ರಶಂಶಿಸಿದ್ದು ಮಾದರಿ ನಡೆಯಾಗಿದೆ. ಈ ರೀತಿ ಮನೆಗೆ ಬಂದು ಗೌರವಿಸಿದ ಕರ್ನಾಟಕದ ಮೊದಲ ಜಿಲ್ಲಾಧಿಕಾರಿ ಎಂದು ಗೌರವದ ಮಾತುಗಳನ್ನು ಹೇಳಿದರು ಮುಂದಿನ ಕೆಲಸ ಮಾಡಲು ಸಿಬ್ಬಂದಿಯಲ್ಲಿ ಹುಮ್ಮಸ್ಸನ್ನು ತುಂಬಿದಂತಾಗಿದೆ. ಈ ಕೆಲಸದಲ್ಲಿ ಯಾರಿಂದಲೂ ಸಿಬ್ಬಂದಿಗೆ ಒತ್ತಡ ಹಾಕಲಾಗಿಲ್ಲ ಈ ಹಿನ್ನೆಲೆಯಲ್ಲಿ ಸಿಬ್ಬಂದಿಯು ಪ್ರೀತಿಯಿಂದ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಮೇಲಿಂದ ಮೇಲೆ ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರ ಮಾರ್ಗದರ್ಶನವೂ ಸಿಗುತ್ತಿರುವುದರಿಂದ ನಿಗದಿತ ಅವಧಿಯಲ್ಲಿ ಪ್ರಕ್ರಿಯೆಯನ್ನು ಮುಗಿಸಿ ಭರವಸೆ ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾರ್ಡಿನ ನಗರಸೇವಕರಾದ ಶ್ರೀ ರವಿ ಸಾಲುಂಕೆ ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಸಾಧಕ ಬಿ ಎಲ್ ಓ ಗಳಾದ ಸತೀಶ ಢವಳೆ, ಪೂನಂ ಬಬಲೆ, ಎಸ್.ಜಿ. ಕವಳೆ. ಮೇಲ್ವಿಚಾರಕರಾದ ಸುಶಾಂತ ಹಾವನ್ನವರ, ಪ್ರಮೋದ ಹಲಗೇಕರ್, ನೋಡಲ್ ಅಧಿಕಾರಿಗಳಾದ ಮಹಾಂತೇಶ ಕುಂಬಾರ ಅವರನ್ನು ಸನ್ಮಾನಿಸಲಾಯಿತು.ಎ.ಎಲ್.ಎಂ.ಟಿ ಗಳಾದ ರಾಜಶೇಖರ್ ನೇಗಿನಹಾಳ, ಪ್ರದೀಪ ಯಡವಿನಾಯ್ಕರ್ ಮಲ್ಲಿಕಾರ್ಜುನ ದೇಶನೂರ ಮೇಲ್ವಿಚಾರಕರಾದ ಸಂತೋಷ ಓಸಿ, ಪ್ರಕಾಶ ಪಾಟೀಲ, ಪವನ ದೇವರವಾಡಿ, ಆನಂದ ಇಟಗಿ ಇತರರು ಇದ್ದರು.

ಫೋಟೋ ಶೀರ್ಷಿಕೆ :

ಶೇ. ನೂರರಷ್ಟು ಪ್ರಗತಿ ಸಾಧಿಸಿದ ದಕ್ಷಿಣ ವಿಧಾನಸಭಾ ಕ್ಷೇತ್ರದ ಬಿ ಎಲ್ ಓ, ಮೇಲ್ವಿಚಾರಕರನ್ನು ಡಿಸಿ ಮೊಹಮ್ಮದ್ ರೋಷನ್ ಸನ್ಮಾನಿಸಿದರು. ಪಾಲಿಕೆಯ ಉಪ ಆಯುಕ್ತ ಡಾ. ಸಿದ್ದು ಹುಲ್ಲೋಳಿ ಇತರರು ಇದ್ದಾರೆ.************************************

Leave a Reply

Your email address will not be published. Required fields are marked *

Back to top button