ಪ್ರಕೃತಿ ಬೆಳಗಾವಿ

*ಸಂಕಷ್ಟಿ ಚತುರ್ಥಿ ಅಂಗವಾಗಿ ಶ್ರೀ ಗಣೇಶನ ಪಾದಪೂಜೆ ಕಾರ್ಯಕ್ರಮ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಶುಕ್ರವಾರ ಸಂಕಷ್ಟಿ ಚತುರ್ಥಿ ಅಂಗವಾಗಿ ಕಲ್ಮೇಶ್ವರ ನಗರದಲ್ಲಿ ಶ್ರೀ ಮೋರಯಾ ಯುವಕ ಮಂಡಳ ವತಿಯಿಂದ ಶ್ರೀ ಗಣೇಶನ ಪಾದಪೂಜೆ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಮೋರಯಾ ಯುವಕ ಮಂಡಳದ ಅಧ್ಯಕ್ಷರಾದ ಸಚಿನ ಸುರೇಶ ಮಂಡು ಹಾಗೂ ಉಪಾಧ್ಯಕ್ಷರಾದ ಕಾರ್ತಿಕ ಯರಝರ್ವಿ ಅವರು ಶ್ರೀ ಗಣೇಶನ ಪಾದಪೂಜೆ ನೆರವೇರಿಸಿದರು.
ಇದೇ ವೇಳೆ ಸಂತ ಭಜನಾ ಮಂಡಳಿಯಿಂದ ಭಕ್ತಿಗೀತೆಗಳು ಮೊಳಗಿದ್ದು, ಭಕ್ತರು ಭಜನೆಗಳಲ್ಲಿ ಪಾಲ್ಗೊಂಡು ಭಕ್ತಿಪೂರ್ವಕವಾಗಿ ಆರಾಧನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಯುವಕರು, ಯುವತಿಯರು, ತಾಯಂದಿರು,ಸುಳೇಭಾವಿ ಗ್ರಾಮದ ಗುರುಹಿರಿಯರು ಹಾಗೂ ಮಾರಿ ಬಾಯ್ಸ್, ಕಾಂತು ಮತ್ತು ಅವರ ಗೆಳೆಯರು ಹೂವಿನ ಅಲಂಕಾರ ಮಾಡಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪೂಜಾರಿಗಳಾದ ಶಿವು ಪೂಜಾರಿ ಸ್ವಾಮಿ ಅವರು ಧಾರ್ಮಿಕ ವಿಧಿವಿಧಾನಗಳೊಂದಿಗೆ ವಿಶೇಷ ಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಶ್ರೀ ಗಣೇಶನ ಕೃಪೆಗೆ ಪಾತ್ರರಾದರು.*********************************

Leave a Reply

Your email address will not be published. Required fields are marked *

Back to top button