*ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸೋಣ: ಡಾ.ಎಸ್.ಎಲ್. ಕಾಡದೇವರಮಠ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಜಿಲ್ಲಾ ಗ್ರಂಥಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ (ರಿ.)ಬೆಂಗಳೂರು, (KALA) ಬೆಳಗಾವಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ರವಿವಾರ ರಂದು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ರಾಜ್ಯಾಧ್ಯಕ್ಷರಾದ ಡಾ. ಎಸ್.ಎಲ್.ಕಾಡದೇವರಮಠ ಅವರು ಅಧ್ಯಕ್ಷತೆ ವಹಿಸಿ,ಮಾತನಾಡುತ್ತ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿ, ಗ್ರಂಥಾಲಯ ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಕಲಾ ಉಪಾಧ್ಯಕ್ಷರು ಹಾಗೂ ಬೆಂಗಳೂರಿನ ಐಆರ್ಸಿ ಟಿಸಿಎಸ್ ನ ಪ್ರಾದೇಶಿಕ ಮುಖ್ಯಸ್ಥರಾದ ಡಾ. ನಾಗಪ್ಪ ಬಕ್ಕಣ್ಣನವರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಹಾಗೂ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಘದ ನಿಯಮಾವಳಿ ಮತ್ತು ಉದ್ದೇಶಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸುವುದಾಗಿ ಪ್ರಮಾಣ ವಚನ ಭೋಧಿಸಿದರು.ಮುಖ್ಯ ಅತಿಥಿಗಳಾಗಿ ಮಾತನಾಡಿದ ಬೆಂಗಳೂರಿನ ಎಲ್ಐಎಸ್ ಅಕಾಡೆಮಿಯ ಅಧ್ಯಕ್ಷರಾದ ಪ್ರೊ. ಪಿ. ವಿ. ಕೊಣ್ಣೂರ ಅವರು ಗ್ರಂಥಾಲಯ ಚಳುವಳಿಯ ಮಹತ್ವ ಮತ್ತು ಗ್ರಂಥಾಲಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರ ಜವಾಬ್ದಾರಿಯ ಬಗ್ಗೆ ವಿವರಿಸಿದರು.
ಮತ್ತು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಬೆಳಗಾವಿ ಜಿಲ್ಲಾ ಘಟಕದ ಸಲಹೆಗಾರರಾದ ಡಾ. ಕಿರಣ್ ಪಿ. ಸವನೂರ ಹಾಗೂ ಬೆಳಗಾವಿ ಜಿಲ್ಲಾ ಗ್ರಂಥಾಲಯ ಅಧಿಕಾರಿ ಶ್ರೀ ರಾಮಯ್ಯ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಾದ ಅಧ್ಯಕ್ಷರಾಗಿ ಡಾ.ಭರತ್ ಬಿ. ಅಲಸಂಡಿ, ಉಪಾಧ್ಯಕ್ಷರುಗಳಾಗಿ ಶ್ರೀ ರವಿ ಡಿ. ಶಿವಣಾಯ್ಕರ ಮತ್ತು ಡಾ. ರಮೇಶ ಬಿ.ಕುರಿ, ಪ್ರಧಾನ ಕಾರ್ಯದರ್ಶಿಯಾಗಿ ಡಾ.ಕಿರಣ ಮಾಳವಾಡೆ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಪ್ರಕಾಶ ಇಚಲಕರಂಜಿ ಹಾಗೂ ಖಜಾಂಚಿಯಾಗಿ ಡಾ. ಸುಮನ್ ಮುದ್ದಾಪುರ ಅವರು ಅಧಿಕಾರ ಸ್ವೀಕರಿಸಿದರು.
ಇದರೊಂದಿಗೆ ಶ್ರೀ ರಾಮಯ್ಯ, ಡಾ.ವೇಣುಗೋಪಾಲ ಹಜ್ಜಿ, ಡಾ.ಅಶ್ವಿನಿ ಲಟ್ಟೆ, ಶ್ರೀಮತಿ ನಳಿನಿ ಅಂಬಲಿ, ಡಾ. ತಾಯಪ್ಪ ಅದಿನ್, ಶ್ರೀ ರಮೇಶ ಶಿರೋಟೆ, ಶ್ರೀ ಸುಪ್ರೀತ್ ಸಕಟ್, ಡಾ. ರಾಜು ಗಡಾದ ಮತ್ತು ಶ್ರೀ ಮಹೇಶ ದೊಡ್ಡಲಕ್ಕಣ್ಣವರ ಅವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಮುಕ್ತ ಚರ್ಚೆ(ಪ್ಯಾನೆಲ್ ಡಿಸ್ಕ್ ಶನ್) ನಡೆಯಿತು. ಈ ಸಂದರ್ಭದಲ್ಲಿ ಸದಸ್ಯರು ಸಂಘದ ಮುಂದಿನ ಕಾರ್ಯಯೋಜನೆ, ಸದಸ್ಯತ್ವ ವೃದ್ಧಿ, ಗ್ರಂಥಾಲಯ ವೃತ್ತಿಪರರ ಕೌಶಲ್ಯಾಭಿವೃದ್ಧಿ, ಸರ್ಕಾರ ಮಟ್ಟದ ನೇಮಕಾತಿ, ತರಬೇತಿ ಕಾರ್ಯಾಗಾರಗಳು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನಗಳ ಆಯೋಜನೆ, ಡಿಜಿಟಲ್ ಗ್ರಂಥಾಲಯ ಸೇವೆಗಳ ವಿಸ್ತರಣೆ ಹಾಗೂ ಜಿಲ್ಲೆಯ ಎಲ್ಲಾ ಗ್ರಂಥಾಲಯಗಳ ನಡುವೆ ಸಮನ್ವಯ ಮತ್ತು ಸಹಕಾರವನ್ನು ಬಲಪಡಿಸುವ ಕುರಿತು ನಡೆದ ಚರ್ಚೆಗೆ ಪದಾಧಿಕಾರಿಗಳುತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.
ಕಾರ್ಯಕ್ರಮವನ್ನು ಡಾ. ರಾಜು ಗಡದ ಮತ್ತು ಡಾ. ಅಶ್ವಿನಿ ಲಟ್ಟೆ ನಡೆಸಿಕೊಟ್ಟರು, ಡಾ. ಕಿರಣ ಮಾಳವಡೆ ವಂದಿಸಿದರು, ಜಿಲ್ಲೆಯ ಗ್ರಂಥಾಲಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.*******************************






