ಪ್ರಕೃತಿ ಬೆಳಗಾವಿ

*ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ‌ಕಾರ್ಯಾಚರಣೆ ಹೆರಾಯಿನ್ ಜಪ್ತಿ, ಮೂವರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಹೆರಾಯಿನ್ ಮಾರುತ್ತಿದ್ದವರ ಮೇಲೆ ಬೆಳಗಾವಿ ಸಿಸಿಪಿ ಪೊಲೀಸರು ಭರ್ಜರಿ ‌ಕಾರ್ಯಾಚರಣೆ ನಡೆಸಿದ್ದು 9.5 ಲಕ್ಷ ಮೌಲ್ಯದ ಹೆರಾಯಿನ್ ವಶಕ್ಕೆ ಪಡೆಯಲಾಗಿದ್ದು ಮೂವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸೋಮವಾರ ಸಿಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿ ನಗರ ನಿವಾಸಿಗಳಾದ ನಿಖಿಲ್ ಬಳ್ಳಾರಿ, ಕಪೀಲ ಹೊಸೂರಕರ್, ಆಕಾಶ ಸಾಳುಂಕೆ ಬಂದಿತ ಆರೋಪಿಗಳು.

ಬಂಧಿತರಿಂದ 9.5 ಲಕ್ಷ ಮೌಲ್ಯದ 47.2 ಗ್ರಾಂ ಹೆರಾಯಿನ್ ಸೇರಿದಂತೆ ಒಟ್ಟು 10 ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಳ್ಳಲಾಗಿದೆ. ಈ‌ ಕುರಿತು ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಿಸಿಪಿ ಇನ್ಸ್ಪೆಕ್ಟರ್ ಮಂಜುನಾಥ ನಾಯಿಕ ಮಾರ್ಗದರ್ಶನದಲ್ಲಿ ಪಿಎಸ್ಐ‌ ಮಂಜುನಾಥ ‌ಭಜಂತ್ರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿ ದಾಳಿ‌ ನಡೆಸಿದ್ದು ಇವರ ಕಾರ್ಯಕ್ಕೆ ನಗರ ಪೊಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.*******************************

Leave a Reply

Your email address will not be published. Required fields are marked *

Back to top button