*ಹಣ ಮರಳಿಸುವಂತೆ ಮಾಜಿ ಸೈನಿಕರ ಮಹಾಒಕ್ಕೂಟದ ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : 4500 ಕೋಟಿ ರೂ. ವಂಚನೆ ಆರೋಪ ಸಂಬಂಧಿಸಿದಂತೆ ಸಿಐಡಿ ವಶದಲ್ಲಿರುವ ಶಿವಾನಂದ ನೀಲಣ್ಣವರ ಹಾಗೂ ಶಿವಂ ಅಸೋಸಿಯೇಟ್ಸ್ ಪ್ರಕರಣ ಇದೀಗ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಪ್ರಕರಣದಲ್ಲಿ ಹಣ ಹೂಡಿಕೆ ಮಾಡಿದ ಮಾಜಿ ಸೈನಿಕರಿಗೆ ಮೊದಲು ಹಣ ಮರಳಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ತನಿಖಾ ಸಂಸ್ಥೆಗಳಿಗೆ ಎಂದು ಮಾಜಿ ಸೈನಿಕರ ಸಂಘಗಳ ಮಹಾಒಕ್ಕೂಟ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ಅವರು ಮನವಿ ಮಾಡಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಒಕ್ಕೂಟದ ಪದಾಧಿಕಾರಿಗಳು, ಹಲವಾರು ಮಾಜಿ ಸೈನಿಕರು ತಮ್ಮ ಜೀವನಪೂರ್ತಿ ದುಡಿದು ಸಂಗ್ರಹಿಸಿದ ಹಣವನ್ನು ಶಿವಂ ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿರುವ ಮಾಹಿತಿ ಇದೆ. 40 ವರ್ಷಗಳ ಸೇನೆಯಲ್ಲಿ ಸೇವೆ ಸಲ್ಲಿಸಿ, ಮ್ಕಕಳ ಭವಿಷ್ಯಕ್ಕಾಗಿ ಒಳ್ಳೆಯ ಸದುದ್ದೇಶದಿಂದ ಹಾಗೂ ಹೆಚ್ಚಿನ ನಂಬಿಕೆಯಿಂದ ಹಣ ಹೂಡಿಕೆ ಮಾಡಿದ್ದರು” ಇದರಲ್ಲಿ ಅವರಿಗೆ ವಂಚನೆ ಆಗಬಾರದು. ಅವರಿಗೆ ಸಮಸ್ಯೆಯಾಗಿದಂತೆ ಹಣ ಮರಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.
“ಯಾರು ಎಲ್ಲಿ ಹೂಡಿಕೆ ಮಾಡಿದ್ದಾರೆ, ಯಾವ ಉದ್ದೇಶದಿಂದ ಮಾಡಿದ್ದಾರೆ ಎಂಬ ಎಲ್ಲ ವಿವರಗಳು ತನಿಖೆಯಲ್ಲಿ ಬಹಿರಂಗವಾಗಲಿವೆ. ಆದರೆ ಮೊದಲ ಹಂತದಲ್ಲೇ ಮಾಜಿ ಸೈನಿಕರ ಪರಿಸ್ಥಿತಿಯನ್ನು ಪರಿಗಣಿಸಿ ಅವರಿಗೆ ಹಣ ವಾಪಸ್ ನೀಡುವ ಪ್ರಕ್ರಿಯೆ ಆರಂಭಿಸಬೇಕು” ಎಂದು ಆಗ್ರಹಿಸಿದರು.
ಇದೇ ವೇಳೆ, “ಸೈನಿಕರು ದೇಶದ ಗಡಿಯಲ್ಲಿ ಜೀವ ಪಣಕ್ಕಿಟ್ಟು ಸೇವೆ ಸಲ್ಲಿಸಿ ಬಂದವರು. ನಿವೃತ್ತಿಯ ಬಳಿಕ ತಮ್ಮ ಕುಟುಂಬದ ಭದ್ರತೆಗೆ ಸಂಗ್ರಹಿಸಿದ ಹಣವನ್ನು ಇಂತಹ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು.
ಹಾಗೆಯೇ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಮಹಾಒಕ್ಕೂಟ, “ಹೆಚ್ಚಿನ ಲಾಭದ ಆಸೆಗೆ ಒಳಗಾಗಿ ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಹಣ ಹೂಡಿಕೆ ಮಾಡುವ ಬದಲು, ಕಾನೂನುಬದ್ಧ ಹಾಗೂ ಸರ್ಕಾರ ಮಾನ್ಯತೆ ಪಡೆದ ಬ್ಯಾಂಕ್‌ಗಳಲ್ಲೇ ಹಣ ಹೂಡಿಕೆ ಮಾಡಬೇಕು” ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೀಶ ಪೂಜೇರಿ ರಮೇಶ ಚೌಗಲಾ ಶಿವಬಸಪ್ಪ ಕಾಡನ್ನವರ, ಮಹೇಶ್ ಕಮ್ಮಾರ್ ಸಂತೋಷ್ ಹಿರೇಮಠ ಅಶೋಕ್ ಮಜಗಿ ರಾಮಚಂದ್ರ ಸುತಾರ, ಬಸವರಾಜ್ ವನ್ನೂರ, ಬಸ್ಸಪ್ಪ ಬರಬಳ್ಳಿ ಹಾಗೂ ಇತರರು.***********************************






