ಪ್ರಕೃತಿ ಬೆಳಗಾವಿ

*HIV ಪೀಡಿತ ಬಾಲಕಿಯರಿಗೆ RCB ಟೀ ಶರ್ಟ್ ವಿತರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರದ ಆರ್ಸಿಬಿ ಅಭಿಮಾನಿಗಳ ತಂಡವಾದ “RCB Fans Belagavi” ಇನ್‌ಸ್ಟಾಗ್ರಾಂ ಪೇಜ್ ವತಿಯಿಂದ ಮಾನವೀಯ ಕಾರ್ಯವೊಂದನ್ನು ಕೈಗೊಳ್ಳಲಾಗಿದ್ದು, ಆಶ್ರಯ ಫೌಂಡೇಷನ್‌ಗೆ ಭೇಟಿ ನೀಡಿ HIV ಪೀಡಿತ ಸುಮಾರು ಇಪ್ಪತ್ತು ಬಾಲಕಿಯರಿಗೆ RCB ಟೀ ಶರ್ಟ್‌ಗಳನ್ನು ವಿತರಿಸಲಾಯಿತು.

ಆಶ್ರಯ ಫೌಂಡೇಷನ್‌ನಲ್ಲಿ ಆಶ್ರಯ ಪಡೆದಿರುವ ಈ ಎಲ್ಲ ಸಹೋದರಿಯರು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಅಪ್ಪಟ ಅಭಿಮಾನಿಗಳಾಗಿದ್ದು, ಅವರ ಅಭಿಮಾನವನ್ನು ಗಮನಿಸಿ @rcbfans.belagavi ತಂಡದ ಸದಸ್ಯರು ವಿಶೇಷವಾಗಿ RCB ಟೀ ಶರ್ಟ್‌ಗಳನ್ನು ಉಡುಗೊರೆಯಾಗಿ ನೀಡಿದರು.

ಟೀ ಶರ್ಟ್‌ಗಳನ್ನು ಸ್ವೀಕರಿಸಿದ ಬಾಲಕಿಯರು ಸಂತಸ ವ್ಯಕ್ತಪಡಿಸಿದ್ದು, ಇಂದಿನ ಪಂದ್ಯವನ್ನು RCB ಟೀ ಶರ್ಟ್ ಧರಿಸಿ ವೀಕ್ಷಿಸಲು ಸಜ್ಜಾಗಿದ್ದಾರೆ.

ಜೊತೆಗೆ RCB ತಂಡಕ್ಕೆ ಶುಭಾಶಯಗಳನ್ನು ತಿಳಿಸಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ “ಆ ದೇವರ ಆಶೀರ್ವಾದ ಸದಾ ಈ ಸಹೋದರಿಯರ ಮೇಲಿರಲಿ” ಎಂದು RCB Fans Belagavi ತಂಡದ ಸದಸ್ಯರು ಹಾರೈಸಿದರು.********************************

Back to top button