ಪ್ರಕೃತಿ ಬೆಳಗಾವಿ

*ಮೊರಾರ್ಜಿ ವಸತಿ ಶಾಲೆಗೆ ಕೊಂಡಿಕೊಪ್ಪ ಶಾಲೆಯ ವಿದ್ಯಾರ್ಥಿ ಯಶವಂತ ಆಯ್ಕೆ: ಗ್ರಾಮಸ್ಥರಿಂದ ಅಭಿನಂದನೆ*

ಪ್ರಕೃತಿ ಬೆಳಗಾವಿ ಸುದ್ದಿ : ಲಕ್ಷ್ಮೇಶ್ವರ : ಸಮೀಪದ ಕೊಂಡಿಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹೆಮ್ಮೆಯ ವಿದ್ಯಾರ್ಥಿಯಾದ ಯಶವಂತ ನಾಗಪ್ಪ ವಾಲ್ಮೀಕಿ ಪ್ರಸಕ್ತ ಸಾಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆರನೇ ತರಗತಿ ಪ್ರವೇಶಾತಿಯ ಪ್ರಥಮ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದು ಸಾಧನೆ ಮಾಡಿದ್ದಾನೆ.

ಈತ ತಾಲೂಕಿನ ವಡೆಯರ ಮಲ್ಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಪ್ರವೇಶ ಪಡೆಯಲು ಅರ್ಹತೆ ಗಳಿಸಿದ್ದಾನೆ. ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ಓದಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಮೊದಲ ಪಟ್ಟಿಯಲ್ಲೇ ಆಯ್ಕೆಯಾಗುವ ಮೂಲಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತಂದಿದ್ದಾನೆ.

ಗುರುಬಳಗ ಹಾಗೂ ಎಸ್‌ಡಿಎಂಸಿ ಶ್ಲಾಘನೆ
ವಿದ್ಯಾರ್ಥಿಯ ಈ ಗಮನಾರ್ಹ ಸಾಧನೆಗೆ ಕೊಂಡಿಕೊಪ್ಪ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು, ಸಹ ಶಿಕ್ಷಕ ಹಾಗೂ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ಪದಾಧಿಕಾರಿಗಳು, ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.

“ಗ್ರಾಮೀಣ ಭಾಗದ ಪ್ರತಿಭೆಗಳು ಸೂಕ್ತ ಮಾರ್ಗದರ್ಶನ ಸಿಕ್ಕರೆ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯಶವಂತನ ಆಯ್ಕೆಯೇ ಸಾಕ್ಷಿ. ಆತನ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಮುಖ್ಯ ಶಿಕ್ಷಕ ಎಂ ಎಸ್ ಹಿರೇಮಠ ಎಸ್ ಡಿ ಎಂ ಸಿ ಅಧ್ಯಕ್ಷರಾದ ದೇವಪ್ಪ ಲಮಾಣಿ ಸದಸ್ಯರಾದಿ ಮಂಜು ರಾಠೋಡ ಶಿಕ್ಷಕರಾದ ಎನ್ ಎಪ್ ಸಜ್ಜನರ ಷಣ್ಮುಖ ಹುಬ್ಬಳ್ಳಿ ಮುಂತಾದವರು ಶುಭ ಹಾರೈಸಿದ್ದಾರೆ.*********************************

Back to top button