ಪ್ರಕೃತಿ ಬೆಳಗಾವಿ

*ಮೈಸೂರಿನ ತಾಯಿ-ಮಗಳ ಸಾಧನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಶ್ಲಾಘನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಗೃಹಲಕ್ಷ್ಮೀ ಯೋಜನೆಯ ಹಣದ ನೆರವಿನಿಂದ ಮೈಸೂರಿನ ಇಲವಾಲದ ವಿದ್ಯಾರ್ಥಿನಿ ಮಾಧುರಿ, ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದು ಯೋಜನೆಯ ಸಾರ್ಥಕತೆಯನ್ನು ತೋರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಇಲವಾಲದ ತಾಯಿ-ಮಗಳ ಸಾಧನೆ ನೋಡಿದಾಗ ಮನಸ್ಸು ತುಂಬಿ ಬರುತ್ತದೆ. ಅನಾರೋಗ್ಯದ ಕಾರಣ ತಾಯಿ ಕೆಲಸ ಬಿಡಬೇಕಾದಾಗ ಆಸರೆಯಾಗಿದ್ದು ನಮ್ಮ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆ. ಇಂದು ಆ ಮಗಳು 625ಕ್ಕೆ 624 ಅಂಕ ಗಳಿಸಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವುದು ಅತ್ಯಂತ ಹೆಮ್ಮೆಯ ವಿಷಯ ಎಂದು ಸಚಿವರು ತಿಳಿಸಿದ್ದಾರೆ.

ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಭರವಸೆಗಳಲ್ಲ, ಲಕ್ಷಾಂತರ ಕುಟುಂಬಗಳ ಕನಸಿಗೆ ಶಕ್ತಿ ತುಂಬುವ ಆಸರೆ ಎಂಬುದಕ್ಕೆ ಈ ಯಶಸ್ಸೇ ಸಾಕ್ಷಿ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.*********************************

Back to top button