ಪ್ರಕೃತಿ ಬೆಳಗಾವಿ

*ಸಿಎಂ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಂಗಳೂರು : ಇಂದು ಸಿಎಂ ಸಿದ್ದರಾಮಯ್ಯ ಭೇಟಿಯಲ್ಲಿ ಏನು ವಿಶೇಷತೆ ಇಲ್ಲ ಅದರಲ್ಲೂ ನಮ್ಮ ಜಿಲ್ಲೆ ಅಭಿವೃದ್ಧಿ ವಿಚಾರಕ್ಕೆ ಭೇಟಿಯಾಗಿದ್ದೇನೆ ಅಷ್ಟೆ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ನಾವು ಡಿಕೆಶಿ ಅವರನ್ನು ಭೇಟಿಯಾಗಿರುವುದು ನಿಜ ನಾವು ಅಬ್ದುಲ್ ಜಬ್ಬಾರ್ ಅವರ ಕುರಿತು ಚರ್ಚೆ ಮಾಡಿದ್ದೇವೆ. ಡಿಸಿಎಂ ಡಿ.ಕೆ. ಶಿವಕುಮಾರ ಅವರು ಕೂಡಾ ಹೈ ಕಮಾಂಡ್ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ ಎಂದರು.

ಸಿಎಂ ಬಗ್ಗೆ ಮಾಜಿ ಸಚಿವ ರಾಜಣ್ಣ ಹೇಳಿಕೆ ವಿಚಾರ ಮಾತನಾಡಿರುವ ಸಚಿವರು, ಮಾಜಿ ಸಚಿವ ಕೆ ಎನ್ ರಾಜಣ್ಣ ಎಲ್ಲ ವಿಚಾರವನ್ನು ನೇರವಾಗಿ ಹೇಳುತ್ತಾರೆ. ಅವರು ಕೂಡಾ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅಸಹಾಯಕ ಎಂದಿದ್ದರು. ಅದರ ಬಗ್ಗೆ ಸಿಎಂ ಅವರೇ ಸ್ಪಷ್ಟನೆ ಕೋಡಬೇಕು ಎಂದರು.***********************************

Back to top button