*ಬೆಳಗಾವಿಯಲ್ಲಿ ಏಪ್ರಿಲ್ 16ರಂದು “ಸ್ಪಂದನ ಮೆಲೋಡೀಸ್” ಸಂಗೀತ ಸಂಭ್ರಮ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಲಿಂಗಾಯತ ಮಹಿಳಾ ಸಮಾಜ, ಕನ್ನಡ ಭವನ ಬೆಳಗಾವಿ ಇವರ ಸಹಯೋಗದಲ್ಲಿ “ಸ್ಪಂದನ ಮೆಲೋಡೀಸ್” ವತಿಯಿಂದ ಏಪ್ರಿಲ್ 16ರಂದು “ಜಾನೆ ಕಹಾಂ ಗಯೇ ವೋ ದಿನ್” (ಕಪೂರ್ ಕುಟುಂಬದ ಹಾಡುಗಳು) ಎಂಬ ವೈವಿಧ್ಯಮಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ನಗರದ ಕನ್ನಡ ಭವನದಲ್ಲಿ ಸಂಜೆ 5.30ಕ್ಕೆ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಹಳೆಯ ಬಾಲಿವುಡ್ನ ಜನಪ್ರಿಯ ಹಾಡುಗಳ ಸವಿನೆನಪುಗಳನ್ನು ಸಂಗೀತಾಸಕ್ತರಿಗೆ ನೀಡಲಾಗುತ್ತದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಲ್ಇ ಸ್ಕೂಲ್ ಆಫ್ ಮ್ಯೂಸಿಕ್ ಕೋ-ಆರ್ಡಿನೇಟರ್ ಡಾ. ರಾಜೇಂದ್ರ ಭಾಂಡಣಕರ್ (ಸೋಲ್ ಆಫ್ ಮ್ಯೂಸಿಕ್) ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಮಿಡೋರಿ ಗಾರ್ಡನ್ ಸ್ಟುಡಿಯೋ ಸ್ಥಾಪಕರಾದ ಬೀನಾ ಸಂಬರಗಿಮಠ ವಹಿಸಲಿದ್ದಾರೆ.
ಈ ಸಂಗೀತ ಸಂಭ್ರಮದಲ್ಲಿ ಶಾಂತಾ ಆಚಾರ್ಯ, ವಿಶ್ವನಾಥ ದೇಸಾಯಿ, ಭುಜಂಗ ಪಾಟೀಲ, ಮಹೇಶ್ ಕುಲಕರ್ಣಿ, ಕವಿತಾ ಜಾಧವ್, ಡಾ. ಮಾಲ್ತೇಶ ಪಾಟೀಲ, ಅಶ್ವಿನಿ, ರಾಘವೇಂದ್ರ ಹಾಗೂ ಮನೋಜ್ ಮಾಲಗತ್ತಿ ಅವರು ಗಾನಮಾಧುರ್ಯ ಹರಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಎಲ್ಲಾ ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಸ್ಪಂದನಾ ಮೆಲೋಡೀಸ್ ನ ಶಾಂತಾ ಆಚಾರ್ಯ, ಲಿಂಗಾಯತ ಮಹಿಳಾ ಸಮಾಜದ ಶೈಲಜಾ ಭಿಂಗೆ ಹಾಗೂ ಕನ್ನಡ ಭವನದ ರತ್ನಪ್ರಭಾ ಬೆಲ್ಲದ ಮನವಿ ಮಾಡಿದ್ದಾರೆ.*********************************






