ಪ್ರಕೃತಿ ಬೆಳಗಾವಿ

*ಗೋಕಾಕದಲ್ಲಿ ಭಗವಾನ್ ಮಹಾವೀರ ಜಯಂತಿ ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನಗರದ ಹಿಲ್‌ ಗಾರ್ಡನ್‌ ಕಚೇರಿಯಲ್ಲಿ ಸೋಮವಾರ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸಲಾಯಿತು. ಇದರ ನಿಮಿತ್ತ ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.

ಸಚಿವರ ಆಪ್ತ ಸಹಾಯಕ ವಿವೇಕ ಜತ್ತಿ ಅವರು ಮಾತನಾಡಿ, ಭಾರತೀಯ ಸಂಸ್ಕೃತಿಯು ವಿಭಿನ್ನತೆಯಲ್ಲೂ ಏಕತೆಯನ್ನು ಹೊಂದಿದೆ. ಭಗವಾನ್ ಮಹಾವೀರರು ಜೈನ ಧರ್ಮದ ಪ್ರತಿಪಾದಕರಾಗಿದ್ದರು. ತೀರ್ಥಂಕರರಾಗಿ ಇವರು, ಅಹಿಂಸೆ, ಶಾಂತಿಗೆ ಹೆಚ್ಚು ಪ್ರಾಧಾನ್ಯತೆ ನೀಡಿ, ಧರ್ಮದ ಪ್ರವರ್ತಕರಾಗಿದ್ದರು. ವಿಶ್ವಕ್ಕೆ ಶಾಂತಿ, ಪ್ರೀತಿ ಮತ್ತು ಸಹಬಾಳ್ವೆಯ ಮಾರ್ಗವನ್ನು ತೋರಿಸಿದ ಮಹಾನ್ ಸಂತರು ಮಹಾವೀರರು, ಕೇವಲ ಯುದ್ಧ ಮಾತ್ರವಲ್ಲದೆ, ಕಾಯ, ವಾಚ, ಮನಸ್ಸಿನಿಂದಲೂ ಯಾವುದೇ ಜೀವಿಗೂ ನೋವುಂಟು ಮಾಡಬಾರದೆಂಬುದು ಇವರ ಮೂಲಮಂತ್ರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ವಿನೋದ ಡೊಂಗರೆ, ಪಾಂಡು ರಂಗಸುಭೆ, ಸಂಜು ನಾಯಕ, ಶಿವು ಪಾಟೀಲ, ಪಾಯನ್ನವರ , ಪ್ರವೀಣ್ ಗುಡ್ಡಾಕಾಯಿ.
ವಿವೇಕ ಜತ್ತಿ. ಮಹೇಶ್ ಉಣ್ಣಿ.ಸಾಯನ್ನವರ ಸರ್.
ಮಂಜು ಸನದಿ ಹಾಗೂ ಇತರರು ಇದ್ದರು.*************************************

Back to top button