ಪ್ರಕೃತಿ ಬೆಳಗಾವಿ
*ಮೋಟಾರ್ ಪಂಪ್, ಕೇಬಲ್ ಕಳ್ಳತನ: ಇಬ್ಬರ ಬಂಧನ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ರೈತರ ಜಮೀನುಗಳಲ್ಲಿ ಮೋಟಾರ್ ಪಂಪ್ ಹಾಗೂ ಕೇಬಲ್ ವೈರ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಮಾರಿಹಾಳ ಪೊಲೀಸರು ಬಂಧಿಸಿದ್ದಾರೆ.
ತುಮ್ಮರಗುದ್ದಿ ಗ್ರಾಮದ ಗುಡದಪ್ಪ ತಳವಾರ (36) ಹಾಗೂ ಕರಿಕಟ್ಟಿ ಗ್ರಾಮದ ಕಲ್ಲಪ್ಪ ನಾಯಕ (42) ಬಂಧಿತ ಆರೋಪಿಗಳು. ಆರೋಪಿಗಳಿಂದ 3.60 ಲಕ್ಷ ರು.ಮೌಲ್ಯದ 12 ಮೋಟಾರ್ ಪಂಪ್‌ಗಳು, 300 ಮೀಟರ್ ಕೇಬಲ್ ವೈರ್ ಹಾಗೂ ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್‌ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಹುದಲಿ, ತುಮ್ಮರಗುದ್ದಿ, ಮಾರಿಹಾಳ, ಖನಗಾಂವ ಹಾಗೂ ರಂಗದೋಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಳ್ಳತನ ನಡೆದಿರುವ ಕುರಿತು ತನಿಖೆ ಮುಂದುವರಿದಿದೆ. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.*********************************






