ಪ್ರಕೃತಿ ಬೆಳಗಾವಿ
ನುಡಿದಂತೆ ನಡೆದ ಶೆಟ್ಟರ್: ಬೆಳಗಾವಿಯಲ್ಲಿ ಮನೆ ಮಾಡಿದ್ರು…!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಎನ್ ಡಿಎ ಮೈತ್ರಿ ಕೂಟದ ಅಭ್ಯರ್ಥಿ ಜಗದೀಶ್ ಶೆಟ್ಟರ್ ಮನೆ ಮಾಡಿದ್ದು, ಯುಗಾದಿ ಹಬ್ಬದ ದಿನವೇ ಗೃಹಪ್ರವೇಶಿಸಿದ್ದಾರೆ.
ಬೆಳಗಾವಿಯ ಕುಮಾರಸ್ವಾಮಿ ಲೇಔಟ್‌ನಲ್ಲಿ ಎರಡು ಮಹಡಿಯ ಮನೆಯನ್ನು ಜಗದೀಶ ಶೆಟ್ಟರ್ ಬಾಡಿಗೆ ಪಡೆದಿದ್ದಾರೆ. ಇನ್ನು ಹೊಸ ಮನೆ ಪ್ರವೇಶ ಮಾಡ್ತಿದ್ದಂತೆ ಶೆಟ್ಟರ್ ಕುಟುಂಬ ವಿಶೇಷ ಪೂಜೆ ಸಲ್ಲಿಸಿದೆ.
ಈ ವೇಳೆ ಜಗದೀಶ ಶೆಟ್ಟರ್ ಅವರಿಗೆ ಪತ್ನಿ ಶಿಲ್ಪಾ ಶೆಟ್ಟರ್, ಸಂಸದೆ ಮಂಗಲ ಅಂಗಡಿ, ಸೊಸೆ ಶೃದ್ಧಾ ಶೆಟ್ಟರ್, ಪುತ್ರ ಸಂಕಲ್ಪ, ಸ್ಫೂರ್ತಿ ಪಾಟೀಲ ಇದ್ದರು.************************************






