ಮಾನವ ಸರಪಳಿ ರಚಿಸಿ ಮತದಾರರ ಜಾಗೃತಿ ಕಾರ್ಯಕ್ರಮ…!!
ಪ್ರಕೃತಿ ಬೆಳಗಾವಿ ಸುದ್ದಿ : ಎಲ್ಲರನ್ನು ಒಳಗೊಳ್ಳುವ ರಾಷ್ಟ್ರ ನಿರ್ಮಾಣ ಮಾಡುವುದು ಸಂವಿಧಾನದ ಆಶಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲ ವಯಸ್ಕರಿಗೂ ಸಮಾನ ಮತದಾನ ಹಕ್ಕು ಕಲ್ಪಿಸಲಾಗಿದೆ. ಎಲ್ಲರೂ ತಪ್ಪದೆ ಮತದಾನ ಮಾಡಬೇಕು ಎಂದು ಲಕ್ಷ್ಮೇಶ್ವರ ತಾಲ್ಲೂಕು ಪಂಚಾಯಿತಿ ಇಓ ಹಾಗೂ ತಾಲ್ಲೂಕು ಸ್ವಿಪ್ ಕಮಿಟಿ ಅಧ್ಯಕ್ಷರಾದ ಕೃಷ್ಣಪ್ಪ ಧರ್ಮಾರ ಅವರು ಲಕ್ಷ್ಮೇಶ್ವರದ ಪಂಪ ಮಹಾಕವಿ ವೃತ್ತದಲ್ಲಿ ಸ್ವಿಪ್ ಕಮಿಟಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಅಭಿಯಾನದಡಿ ಹಮ್ಮಿಕೊಂಡಿದ್ದ ಮಾನವ ಸರಪಳಿ ಮತ್ತು ಮಾನವ ಪಿರಮಿಡ್ಗೆ ಚಾಲನೆ ನೀಡಿ.
ಅವರು ಮಾತನಾಡಿದರು. ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಪ್ರತಿಯೊಬ್ಬ ನಾಗರಿಕ ತನ್ನ ಜವಾಬ್ದಾರಿ ಅದನ್ನು ಅರಿತು ಮತದಾನದಲ್ಲಿ ಪಾಲ್ಗೊಳ್ಳಬೇಕು ಹಾಗೂ ಮೇ 7ರಂದು ಲೋಕಸಭೆ ಚುನಾವಣೆಗೆ ಮತದಾನ ಜರುಗಲಿದೆ. ಎಲ್ಲರೂ ತಪ್ಪದೆ ಮತದಾನವನ್ನು ಮಾಡಿದಾಗ ಮಾತ್ರ ಶೇ 99% ರಷ್ಟು ಮತದಾನದ ಹೆಚ್ಚಳ ಮಾಡಬೇಕಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ ಹೇಳಿದರು.
ಮುಂಬರುವ ಲೋಕ ಸಭಾ ಚುನಾವಣೆಯಲ್ಲಿ ತಮ್ಮ ಸಂವಿಧಾನ ಬದ್ಧವಾದ ಮತದಾನದ ಹಕ್ಕನ್ನು ತಪ್ಪದೇ ತಮ್ಮ ಮತವನ್ನು ಚಲಾಯಿಸಬೇಕು ನಿಮ್ಮ ಅಮೂಲ್ಯವಾದ ಮತದಾನ ದೇಶದ ಭವಿಷ್ಯವನ್ನು ಬದಲಾವಣೆ ಮಾಡುತ್ತದೆ. ಅದಕ್ಕಾಗಿ ನಿಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ ಎಂದು ಬಿ ಆರ್ ಪಿ ಈಶ್ವರ ಮೆಡ್ಲೇರಿ ಮನವಿ ಮಾಡಿದರು.
ಇದೇ ವೇಳೆ ಶಾಲಿನ್ ಕರಾಟೆ ಅಕಾಡೆಮಿಯ ಮಕ್ಕಳಿಂದ ಮಾನವ ಪಿರಮಿಡ್ ನಿರ್ಮಾಣ ಮಾಡಿದ್ದು ಅತ್ಯಕರ್ಷವಾಗಿತ್ತು. ಹಾಗೆಯೇ ಲಕ್ಷ್ಮೇಶ್ವರ ಪಟ್ಟಣದ ಎಲ್ಲ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಾಲೆಗಳ ಶಿಕ್ಷಕರಿಂದ ಮಾನವ ಸರಪಳಿ ಏರ್ಪಡಿಸಿ, ಮತದಾನದ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ತಾಲ್ಲೂಕು ಸ್ವಿಪ್ ಕಮಿಟಿ ಅಧ್ಯಕ್ಷರಾದ ಕೃಷ್ಣಪ್ಪ ಧರ್ಮಾರ, ಪುರಸಭೆ ಮುಖ್ಯಾಧಿಕಾರಿ ಮಹೇಶ ಹಡಪದ, ಬಿ ಆರ್ ಪಿ ಮಿತ್ರರಾದ ಈಶ್ವರ ಮೆಡ್ಲೇರಿ, ಬಸವರಾಜ ಎಮ್ ಯರಗುಪ್ಪಿ, ವಾಸು ದೀಪಾಳಿ, ಸಿ ಆರ್ ಪಿ ಯವರಾದ ಸತೀಶ ಬೊಮಲೆ, ಉಮೇಶ ನೇಕಾರ,ಆರ್ ಮಹಾಂತೇಶ, ಎನ್ ಎ ಮುಲ್ಲಾ, ನಾಗರಾಜ ಮಜ್ಜಿಗುಡ್ಡ ಮತ್ತು ಶಾಹಿನ್ ಕರಾಟೆ ಅಕಾಡೆಮಿಯ ಸಯ್ಯದ್ ರಫಿಕ್ ಪೀರಜಾದೆ, ಜಿಲ್ಲಾ ನೌಕರರ ಸಂಘದ ಪರಿಷತ್ ಸದಸ್ಯರಾದ ಎಮ್ ಎಸ್ ಹಿರೇಮಠ, ಮಂಜುನಾಥ್ ಮುದಗಲ್, ಎಸ್ ಬಿ ಅಣ್ಣಿಗೇರಿ, ಪ್ರಧಾನ ಗುರುಗಳಾದ ಜೆ ಡಿ ಲಮಾಣಿ,ಡಿ ಎನ್ ದೊಡ್ಡಮನಿ, ಎಚ್ ಬಿ ಸಣ್ಣಮನಿ, ಕೆ ಡಿ ಕಗ್ಗಲಗೌಡರ, ಎಸ್ ಪಿ ಮುಳಗುಂದ, ಶ್ರೀಮತಿ ಎಲ್ ಎಮ್ ಹುರಕುಪ್ಪಿ, ಜಿ ಡಿ ಕಲ್ಲಣ್ಣವರ, ಅಶೋಕ ಪೀಟರ್, ಸಿ ಎಫ್ ಪಾಟೀಲ, ಜಿ ಎನ್ ಶೀರನಹಳ್ಳಿ, ಐ ಆರ್ ಕುಲಕರ್ಣಿ, ಎಸ್ ಎನ್ ಕ್ಷತ್ರಿಯ, ಎಸ್ ಎಸ್ ಜಿರಂಕಳ್ಳಿ ಹಾಗೂ ಎಲ್ಲಾ ಶಾಲೆಗಳ ಶಿಕ್ಷಕರು ಹಾಜರಿದ್ದರು.*********************************






