ಸಂಜಯ್ ಪಾಟೀಲ್ ರವರು ತಮ್ಮ ಪಕ್ಷ ಗೆಲ್ಲಿಸುವಲ್ಲಿ ಪ್ರಯತ್ನ ಮಾಡಲಿ ಇನ್ನೊಬ್ಬರ ವಿರುದ್ದ ಏಕವಚನದಲ್ಲಿ ಹೇಳಿಕೆ ನೀಡುವುದರಲ್ಲಿ ಅಲ್ಲ …!!
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಾಜಿ ಸಚಿವ ಸಂಜಯ್ ಪಾಟೀಲ್ ರವರು ದಿನಾಂಕ 7/04/2024 ರಂದು ಗೋಕಾಕ್ ನಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮ ಒಂದರಲ್ಲಿ ಭಾಷಣ ಮಾತನಾಡುವ ಬರದಲ್ಲಿ ಕಾಂಗ್ರೆಸ್ ಪಕ್ಷದ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ ರವರ ವಿರುದ್ದ ಏಕವಚನದಲ್ಲಿ ಹೇಳಿಕೆ ನೀಡಿರುವುದು ಖಂಡನೀಯ ಸಂಜಯ್ ಪಾಟೀಲ್ ರವರು ಮಾಜಿ ಶಾಸಕರಾಗಿ ಒಬ್ಬರಿಗೆ ಗೌರವ ಕೊಡುವುದನ್ನು ಕಲಿಯಬೇಕಿದೆ ಆಮೇಲೆ ಪಕ್ಷ ಗೆಲ್ಲಿಸುವಲ್ಲಿ ಶ್ರಮಿಸಲಿ.
ಸಂಜಯ್ ಪಾಟೀಲ್ ರವರು ಇಂತಹ ಅಗೌರವ ಭಾಷಣಗಳಿಂದಲೆ ತಮ್ಮ ವ್ಯಕ್ತಿತ್ವ ಕಳೆದುಕೊಳ್ಳುವುದಲ್ಲದೆ ಪಕ್ಷದಿಂದಲೂ ಯಾವುದೆ ಹೇಳಿಕೊಳ್ಳುವಂತಹ ಅಧಿಕಾರ ಪಡೆಯದೆ ಶಾಸಕ ಸ್ಥಾನಕ್ಕೆ ಹಾಗೂ ಎಂಪಿ ಸ್ಥಾನಕ್ಕೂ ಹೆಸರು ಕೇಳಿ ಬರಲಿಲ್ಲ ಸಂಜಯ ಪಾಟೀಲ ರವರು ಇಂತಹ ಎಕವಚನಗಳ ಶಬ್ದಗಳನ್ನು ಬಳಿಸುವುದು ಬಿಟ್ಟು ಇನ್ನೊಬ್ಬರ ವಿರುದ್ದ ದ್ವೇಷದ ರಾಜಕಾರಣ ಮಾಡುವುದನ್ನು ನಿಲ್ಲಿಸಿ ತಮ್ಮ ಪಕ್ಷ ಗೆಲ್ಲಿಸುವಲ್ಲಿ ಶ್ರಮಿಸಲಿ ಅದನ್ನು ಬಿಟ್ಟು ಇದೆ ರೀತಿ ಮುಂದುವರೆದರೆ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಚ್ಚರಿಕೆ ಎಂದು ಸಾಮಾಜಿಕ ಹೋರಾಟಗಾರ ಮಹೇಶ ಶಿಗೀಹಳ್ಳಿ ತಿಳಿಸಿದ್ದಾರೆ.*******************************






