ಪ್ರಕೃತಿ ಬೆಳಗಾವಿ

*ರಾಜ್ಯಾಧ್ಯಕ್ಷ ಹರೀಶ್ ಅವರ ಮಾರ್ಗದರ್ಶನದಲ್ಲಿ ಕನ್ನಡ ಸೇವೆಗೆ ಹೊಸ ಹೆಜ್ಜೆ*

*ಜುಲೈ 26ರಂದು ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ನೂತನ ಉದ್ಘಾಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕನ್ನಡ ನಾಡು, ನುಡಿ, ನೆಲ-ಜಲ, ಗಡಿ ಹಾಗೂ ಕನ್ನಡಿಗರ ಹಕ್ಕುಗಳ ರಕ್ಷಣೆಯನ್ನು ಮುಖ್ಯ ಧ್ಯೇಯವಾಗಿಟ್ಟುಕೊಂಡು, ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯು ರಾಜ್ಯಾಧ್ಯಕ್ಷರಾದ ಹರೀಶ್ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಾದ್ಯಂತ ಕನ್ನಡ ಸೇವೆ ಮಾಡಲು ಸಜ್ಜಾಗಿದ್ದು, ಸಂಘಟನೆಯ ನೂತನ ಉದ್ಘಾಟನಾ ಸಮಾರಂಭವು ಇದೇ ಭಾನುವಾರ, ಜುಲೈ 26ರಂದು ನಡೆಯಲಿದೆ.

ಈ ಕುರಿತು ಸಂಘಟನೆಯ ಉತ್ತರ ಕರ್ನಾಟಕ ಉಸ್ತುವಾರಿ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷ ಬಾಳಪ್ಪಾ ಬಿ. ಗುಡಗೇನಟ್ಟಿ ಪತ್ರಿಕಾ ಪ್ರಕಟಣೆ ನೀಡಿ, ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲ, ಗಡಿ ಹಿತಾಸಕ್ತಿ, ರೈತರ ಸಮಸ್ಯೆಗಳು, ಯುವಜನರ ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘಟನೆಯು ರಾಜ್ಯದಾದ್ಯಂತ ನಿರಂತರ ಹೋರಾಟ ಮತ್ತು ಸೇವಾ ಕಾರ್ಯಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷರಾದ ಹರೀಶ್ ಅವರ ಮಾರ್ಗದರ್ಶನದಲ್ಲಿ ಸಂಘಟನೆಯನ್ನು ಮತ್ತಷ್ಟು ಬಲಿಷ್ಠವಾಗಿ ಕಟ್ಟುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲಾಗುತ್ತಿದ್ದು, ಕನ್ನಡಿಗರ ಧ್ವನಿಯಾಗಿ ನಿಲ್ಲುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ನೂತನ ಸಂಘಟನೆಯ ಉದ್ಘಾಟನಾ ಸಮಾರಂಭದಲ್ಲಿ ಕನ್ನಡಾಭಿಮಾನಿಗಳು, ವಿವಿಧ ಕನ್ನಡಪರ ಹಾಗೂ ಸಾಮಾಜಿಕ ಸಂಘಟನೆಗಳ ಮುಖಂಡರು, ಯುವಕರು, ಸಾರ್ವಜನಿಕರು ಹಾಗೂ ಪತ್ರಿಕಾ ಮತ್ತು ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಸ್ಥಳ :

ಕನ್ನಡ ಭವನ ಆವರಣ, ಶೇಖ್ ಆಸ್ಪತ್ರೆ ಎದುರು, ರಾಮದೇವ್ ಹೋಟೆಲ್ ಹತ್ತಿರ, ನೇಹರು ನಗರ, ಬೆಳಗಾವಿ.

ಬನ್ನಿ… ಸದಸ್ಯರಾಗಿ, ಕನ್ನಡದ ಸೇವೆಗೆ ಕೈಜೋಡಿಸಿ.

ಬಾಳಪ್ಪಾ ಬಿ. ಗುಡಗೇನಟ್ಟಿಉತ್ತರ ಕರ್ನಾಟಕ ಉಸ್ತುವಾರಿ ಹಾಗೂ ಬೆಳಗಾವಿ ಜಿಲ್ಲಾಧ್ಯಕ್ಷರುಕರ್ನಾಟಕ ರಕ್ಷಣಾ ಟೈಗರ್ಸ್

ಸಂಪರ್ಕ : +918722346259

Leave a Reply

Your email address will not be published. Required fields are marked *

Back to top button