*ಬಿಎಲ್ ಓ ಕಾರ್ಯಕ್ಕೆ ಒತ್ತಡ ಹೇರುವ ಬದಲು ಸಹಕಾರ ನೀಡಲು ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಬಿಎಲ್ ಓ ಕಾರ್ಯಕ್ಕೆ ಒತ್ತಡ ಹೇರುವ ಬದಲು ಶಿಕ್ಷಕರಿಗೆ ಸಹಕಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಲಕ್ಷ್ಮೇಶ್ವರ ವತಿಯಿಂದ ಇಂದು ಲಕ್ಷ್ಮೇಶ್ವರದ ವತಹಶೀಲ್ದಾರ್ ಧನಂಜಯ ಎಂ ಅವರಿಗೆ ಮನವಿ ಸಲ್ಲಿಸಲಾಯಿತು.
ಅವಳಿ ಸಂಘದ ಅಧ್ಯಕ್ಷರಾದ ಗುರುರಾಜ ಹವಳದ, ಮಹದೇವಪ್ಪ ಭರಮಗೌಡರ ಮತ್ತು ಕಾರ್ಯದರ್ಶಿ ಎಮ್ ಎ ನದಾಫ, ಶ್ರೀಕಾಂತ ನಂದೆಣ್ಣವರ ಮಾತನಾಡಿ, ಕಂದಾಯ ಇಲಾಖೆ ನೀಡುವ ಚುನಾವಣೆ ಮತ್ತು ಇತರೆ ಕಾರ್ಯಗಳನ್ನು ಶಿಕ್ಷಕರು ಚಾಚು ತಪ್ಪದೇ ಮಾಡುತ್ತಿದ್ದಾರೆ.
ಆದರೆ ಈಗ ಶಿಕ್ಷಕರಿಗೆ ಎಸ್ ಐ ಆರ್ ಕೆಲಸ ಜುಲೈ 29 ರವರಿಗೆ ಕಾರ್ಯ ನಡೆಯುತ್ತಿದೆ ಹಾಗೆಯೇ ಶಿಕ್ಷಣ ಇಲಾಖೆಯ ಒತ್ತಡದ ಕೆಲಸಗಳು ಹೆಚ್ಚಾಗಿವೆ ಶಾಲೆಗಳು ಆರಂಭಗೊಂಡಿದ್ದು ಶಿಕ್ಷಕರು ಇದರಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಳ್ಳಬೇಕಿದೆ. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಶಿಕ್ಷಕರ ಕೊರತೆಯೂ ಸಾಕಷ್ಟಿದೆ. ಇತರೆ ಇಲಾಖೆಯ ಕೆಲಸಗಳಿಂದ ಬೋಧನೆಗೆ ಸಮಯವೇ ಸಿಗುತ್ತಿಲ್ಲ. ಇದು ಮಕ್ಕಳ ಪಾಠದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದರು.
ಸಂಘದ ಅಧ್ಯಕ್ಷರಾದ ಗುರುರಾಜ ಹವಳದ, ಮಹದೇವಪ್ಪ ಭರಮಗೌಡರ ಮತ್ತು ಕಾರ್ಯದರ್ಶಿ ಎಮ್ ಎ ನದಾಫ, ಶ್ರೀಕಾಂತ ನಂದೆಣ್ಣವರ ಹಾಗೂ ಸಂಘದ ಖಜಾಂಚಿ ಎಮ್ ಡಿ ವಾರದ,ರಾಜ್ಯ ಪರಿಷತ್ ಸದಸ್ಯ ಎ ಬಿ ಗೌಡರ,
ನಿರ್ದೇಶಕರಾದ ಬಸವರಾಜ ಯರಗುಪ್ಪಿ, ಹನೀಪ್ ಶಿರಹಟ್ಟಿ,ಪ್ರಶಾಂತ ಸನದಿ, ಜಿಲ್ಲಾ ನಾಮನಿರ್ದೇಶಿತ ಸದಸ್ಯರಾದ ಎಮ್ ಎಸ್ ಹಿರೇಮಠ, ಎಮ್ ಎಸ್ ಚಾಕಲಬ್ಬಿ ಹಾಜರಿದ್ದರು.*********************************






