ಪ್ರಕೃತಿ ಬೆಳಗಾವಿ

ಗೋಕಾಕ ಗ್ರಾಮೀಣ ಪೊಲೀಸ್ ಠಾಣೆಯ ಪ್ರಕಟಣೆ…!!

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ್ : ಇತ್ತಿಚಿನ ದಿನಗಳಲ್ಲಿ ಅಪರಿಚಿತರು ಹೆಣ್ಣು ಮಕ್ಕಳಿಗೆ ಡ್ರಾಪ್ ಕೊಡುವ ನೆಪದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಹೆದರಿಸಿ ಬೆದರಿಸಿ ಬಂಗಾರ,ಹಣ,ಮೊಬೈಲ್ ಗಳನ್ನು ಕಸಿದುಕೊಂಡು ಬಿಟ್ಟು ಹೋಗುವ ಘಟನೆಗಳು ನಡೆಯುತ್ತಿದ್ದು.

ಆದಕಾರಣ ಗೋಕಾಕ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲ ಗ್ರಾಮಗಳ ಸಾರ್ವಜನಿಕರಿಗೆ ಈ ಮೂಲಕ ತಿಳಿಸುವುದೇನೆಂದರೆ ಹೆಣ್ಣು ಮಕ್ಕಳು ಪ್ರಯಾಣ ಮಾಡುವಾಗ ಯಾವುದೇ ಅಪರಿಚಿತ ಕಾರ್,ಬೈಕ್ ಇತ್ಯಾದಿ ವಾಹನಗಳಲ್ಲಿ ಡ್ರಾಪ್ ಕೇಳಿ (ಅವರೇ ಡ್ರಾಪ್ ಕೊಡುತ್ತೇವೆ ಎಂದು ಕರೆದರು) ಹೋಗಬಾರದು ಮತ್ತು ಹೆಣ್ಣು ಮಕ್ಕಳು ಪ್ರಯಾಣ ಮಾಡುವಾಗ ಮೈ ಮೇಲೆ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ಹಾಕಿಕೊಳ್ಳಬಾರದು ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.*************************

ಪಿಎಸ್ಐ
ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ…

Back to top button