ಪ್ರಕೃತಿ ಬೆಳಗಾವಿ

*ಬೆಳಗಾವಿ ಗಣೇಶೋತ್ಸವ: ಸಂಚಾರ ದಟ್ಟಣೆಗೆ ಮುಕ್ತಿ ನೀಡಲು ಪೊಲೀಸ್ ಕಮಿಷನರೇಟ್‌ ನಿಂದ ವಿಶೇಷ ‘ಜಿಪಿಎಸ್ ಲಿಂಕ್’ ವ್ಯವಸ್ಥೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಾಂಸ್ಕೃತಿಕ ನಗರಿ ಬೆಳಗಾವಿಯಲ್ಲಿ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುವ ಗಣೇಶೋತ್ಸವಕ್ಕೆ ಸಾರ್ವಜನಿಕರ ಹರಿವು ಹೆಚ್ಚುತ್ತಿದ್ದು, ಸಂಚಾರ ದಟ್ಟಣೆಯನ್ನು ತಡೆಯಲು ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್ ಮಹತ್ವದ ಡಿಜಿಟಲ್ ಹೆಜ್ಜೆಯೊಂದನ್ನು ಇಟ್ಟಿದೆ.

​ಬೆಳಗಾವಿಯ ವೈವಿಧ್ಯಮಯ ಗಣೇಶ ಮೂರ್ತಿಗಳು ಹಾಗೂ ಮಂಟಪಗಳ ಅಲಂಕಾರವನ್ನು ವೀಕ್ಷಿಸಲು ರಾಜ್ಯ ಮತ್ತು ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಇದರಿಂದ ಉಂಟಾಗುವ ವಾಹನ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರ ಕಲ್ಪಿಸಲು ಪೊಲೀಸರು ವಿಶೇಷ ಯೋಜನೆ ರೂಪಿಸಿದ್ದಾರೆ.

ಏನಿದು ‘ಡಿಜಿಟಲ್ ಸಂಚಾರ ಯೋಜನೆ’?

ಗಣೇಶ ಪೆಂಡಾಲ್‌ಗಳ ಹತ್ತಿರದಲ್ಲೇ ವಾಹನ ನಿಲುಗಡೆಗೆ (ಪಾರ್ಕಿಂಗ್) ಪ್ರತ್ಯೇಕ ಸ್ಥಳಗಳನ್ನು ಗುರುತಿಸಲಾಗಿದ್ದು, ಸಾರ್ವಜನಿಕರು ಸುಲಭವಾಗಿ ತಲುಪಲು ಜಿಪಿಎಸ್ ಆಧಾರಿತ ಲಿಂಕ್ ಒಂದನ್ನು ಸಿದ್ಧಪಡಿಸಲಾಗಿದೆ:
👉 https://ganeshdarshan.belagavicitypolice.in/

​ಸಾರ್ವಜನಿಕರು ಹಾಗೂ ಪ್ರವಾಸಿಗರು ಈ ಲಿಂಕ್ ಬಳಸಿಕೊಂಡು ಜಿಪಿಎಸ್ ನೆರವಿನಿಂದ ತಮಗೆ ಬೇಕಾದ ಗಣೇಶ ಮೂರ್ತಿಯ ಪೆಂಡಾಲ್ ಹಾಗೂ ಅದರ ಹತ್ತಿರದಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಯಾವುದೇ ಅಡಚಣೆಯಿಲ್ಲದೆ ತಲುಪಬಹುದಾಗಿದೆ.

ಡಿಜಿಟಲೀಕರಣದ ಸ್ಪರ್ಶದೊಂದಿಗೆ ಸಿದ್ಧಪಡಿಸಲಾದ ಈ ತಂತ್ರಜ್ಞಾನ ಆಧಾರಿತ ಸೇವೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ನಗರದಲ್ಲಿ ಸುಗಮ ಸಂಚಾರ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಬೆಳಗಾವಿ ನಗರ ಪೊಲೀಸರೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ.*********************************

Leave a Reply

Your email address will not be published. Required fields are marked *

Back to top button