*ಗೋಕಾಕ ನಗರದ ಹೊರವಲಯದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ : ನಗರದ ಹೊರವಲಯದಲ್ಲಿರುವ ಶ್ರೀ ಸಂಗಮೇಶ್ವರ ದೇವಾಲಯಕ್ಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು.
ಘಟಪ್ರಭಾ ಮಾರ್ಕಂಡೇಯ ನದಿಗಳ ಪವಿತ್ರ ಸಂಗಮ ಕ್ಷೇತ್ರ ಹಾಗೂ ಶ್ರೀ ಸಂಗಮೇಶ್ವರ ದೇವಸ್ಥಾನ ಗೋಕಾಕ ಇದರ ಅಭಿವೃದ್ಧಿಗೆ ಪೂರಕವಾಗಿ ಈ ಭಾಗದ ಜನರ ಬೇಡಿಕೆಯಂತೆ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿ ಬೇಡಿಕೆಗೆ ಪೂರಕವಾಗಿ ಸ್ಪಂಧಿಸಿದ್ದ ಕರ್ನಾಟಕ ಸರಕಾರದ ಲೋಕೋಪಯೋಗಿ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಈಗ ಅಧೀಕೃತವಾಗಿ ಗೋಕಾಕದ ಜ್ಞಾನ ಮಂದಿರ ಆಧಾತ್ಮ ಕೇಂದ್ರದಿಂದ ಗೋಕಾಕ ಪಾಲ್ಸದ ಮುಖ್ಯ ರಸ್ತೆಯವರೆಗಿನ ಸಿ.ಸಿ. ರಸ್ತೆ ನಿಮಾರ್ಣಕ್ಕೆ ಅಂದಾಜು ೩ ಕೋಟಿ ರೂಪಾಯಿಗಳ ವೆಚ್ಚದ ರಸ್ತೆ ನಿರ್ಮಾಣಕ್ಕೆ ತಮ್ಮ ಇಲಾಖೆಯಿಂದ ಅಧಿಕೃತವಾಗಿ ಮಂಜೂರಾತಿ ನೀಡಿದರು.
ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಅಶೋಕ್ ಪೂಜಾರಿ ಅವರು ದೇವಸ್ಥಾನದ ಸುತ್ತ ಮುತ್ತ ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳಾಗಿ ಮಾಡಬೇಕಾಗಿ ವಿನಂತಿಸಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಅಶೋಕ್ ಪೂಜಾರಿ, ರಾಜು ಮುನ್ನೋಳಿ, ಬಸವರಾಜ ಕಲ್ಯಾಣಶೆಟ್ಟಿ, ಯಲ್ಲಪ್ಪಾ ಪೂಜೇರಿ, ಬಸವರಾಜ ದೇಶನೂರ ಮಂಜುನಾಥ ಪೂಜೇರಿ ಸಂಜಿವ ಪೂಜಾರಿ ಹಾಗೂ ಸಚಿವರ ಆಪ್ತರಾದ ಶಿವು ಪಾಟೀಲ್, ಆರೀಫ್ ಪಿರಜಾದೆ ಹಾಗೂ ಅನೇಕರು ಉಪಸ್ಥಿತರಿದ್ದರು*********************************






