ಪ್ರಕೃತಿ ಬೆಳಗಾವಿ

*ಮಾತೃಭಾಷೆ, ನೆಲ-ಜಲದ ಬಗ್ಗೆ ಅಭಿಮಾನ ಇರಲಿ: ವಿನೋದ್ ದೇಶಪಾಂಡೆ*

*ಕ್ರಾಂತಿ ಮಹಿಳಾ ಮಂಡಳದಿಂದ 80ನೇ ಸ್ವಾತಂತ್ರ್ಯೋತ್ಸವ ಆಚರಣೆ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ದೇಶ ಸೇವೆಯಲ್ಲಿ ತಾಯಂದಿರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಂದಿರು ಮಾಡುವ ಸಮಾಜಮುಖಿ ಸೇವೆಯೂ ದೇಶ ಸೇವೆಯಷ್ಟೇ ಮಹತ್ವ ಹೊಂದಿದೆ. ಪ್ರತಿಯೊಬ್ಬರೂ ತಮ್ಮ ಭಾಷೆ, ವೇಷಭೂಷಣ ಹಾಗೂ ನೆಲದ ಬಗ್ಗೆ ಅಭಿಮಾನ ಹೊಂದಬೇಕು ಎಂದು ಸಮುತ್ಕರ್ಷ್ ಸಂಸ್ಥೆಯ ಸಂಸ್ಥಾಪಕ ವಿನೋದ್ ದೇಶಪಾಂಡೆ ಹೇಳಿದರು.

ನಗರದ ಹಿಂದವಾಡಿಯ ಗೋಮಟೇಶ ವಿದ್ಯಾಪೀಠದಲ್ಲಿ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ಸಹಯೋಗದಲ್ಲಿ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾರತವನ್ನು ಭಾರತಾಂಬೆ ಎಂದು ಕರೆಯಲಾಗುತ್ತದೆ. ನಾವು ನಮ್ಮತನವನ್ನು ಎಂದಿಗೂ ಬಿಟ್ಟುಕೊಡಬಾರದು. ಅವಕಾಶ ದೊರೆತಾಗಲೆಲ್ಲ ಮಾತೃಭಾಷೆಯಲ್ಲಿ ಮಾತನಾಡುವ ಮೂಲಕ ಭಾಷೆಯ ಮೇಲಿನ ಅಭಿಮಾನವನ್ನು ಬೆಳೆಸಿಕೊಳ್ಳಬೇಕು. ಯುವಜನತೆ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿತುಕೊಂಡು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕ್ರಾಂತಿ ಮಹಿಳಾ ಮಂಡಳವು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸ ಹಾಗೂ ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಂಡಳದ ವತಿಯಿಂದ ವಿನೋದ್ ದೇಶಪಾಂಡೆ ಅವರನ್ನು ಸನ್ಮಾನಿಸಲಾಯಿತು.

ಶ್ರಾವಣ ಮಾಸದ ನಿಮಿತ್ತ ಮಂಡಳದ ಸದಸ್ಯರಿಗೆ ಅರಿಶಿನ–ಕುಂಕುಮ ನೀಡಿ ಉಡಿ ತುಂಬುವ ಕಾರ್ಯಕ್ರಮ ನಡೆಯಿತು. ಸದಸ್ಯರಿಗಾಗಿ ಆಯೋಜಿಸಿದ್ದ ಟ್ಯಾಲೆಂಟ್ ಶೋನಲ್ಲಿ ಹಲವರು ವಿವಿಧ ಪ್ರತಿಭೆಗಳನ್ನು ಪ್ರದರ್ಶಿಸಿ ಬಹುಮಾನ ಪಡೆದರು. ಆರ್ಷ ಆಶ್ರಮದ ಹೆಣ್ಣುಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು.

ಮಂಡಳದ ಅಧ್ಯಕ್ಷೆ ಮಂಗಲಾ ಮಠದ ಸ್ವಾಗತಿಸಿದರು. ಕಾರ್ಯದರ್ಶಿ ಭಾರತಿ ರತ್ನಪ ಗೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾ ಕಾಡನ್ನವರ್ ಅತಿಥಿಗಳ ಪರಿಚಯ ಮಾಡಿದರು. ರತ್ನ ಗುಡಗನಟ್ಟಿ ಪ್ರಾರ್ಥನಾ ಗೀತೆ ಹಾಡಿದರು. ಕಾರ್ಯಕ್ರಮದ ಪ್ರಾಯೋಜಕರಾದ ರತ್ನ ಶ್ರೀ ಗುಡೆರ್ ನಿರೂಪಿಸಿದರು. ರೇಣುಕಾ ಕಾಂಬಳೆ ವಂದಿಸಿದರು. ಡಾ. ರಾಜೇಂದ್ರ ಮಠದ, ಡಾ. ಗುಡಗನಟ್ಟಿ, ಮಂಡಳದ ಸದಸ್ಯರು ಹಾಗೂ ಆರ್ಷ ಆಶ್ರಮದ ಮಕ್ಕಳು ಉಪಸ್ಥಿತರಿದ್ದರು.*******************************

Leave a Reply

Your email address will not be published. Required fields are marked *

Back to top button