ಪ್ರಕೃತಿ ಬೆಳಗಾವಿ

*ಯಮಕನಮರಡಿ ಕ್ಷೇತ್ರದಲ್ಲಿ ಮುಂದುವರೆದ ಶಾಲೆಗಳ ಅಭಿವೃದ್ಧಿ ಪರ್ವ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಯಮಕನಮರಡಿ ಮತಕ್ಷೇತ್ರದ ಹಳೆವಂಟಮೂರಿ ಗ್ರಾಮದ ಶಾಲೆಗೆ ಮಂಜೂರಾದ ತಲಾ ₹36 ಲಕ್ಷ ವೆಚ್ಚದ ಎರಡು ಶಾಲಾ ಕೊಠಡಿಗಳ ಹಾಗೂ ಚಿಲಭಾವಿ ಗ್ರಾಮದ ಶಾಲೆಗೆ ಮಂಜೂರಾದ ₹18 ಲಕ್ಷ ವೆಚ್ಚದ ಒಂದು ಶಾಲಾ ಕೊಠಡಿಯ ನಿರ್ಮಾಣಕ್ಕೆ ಇಂದು ಅಡಿಗಲ್ಲು ನೆರವೇರಿಸಲಾಯಿತು.

ಮಾನ್ಯ ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ, ಸಂಸದೆ ಕು. ಪ್ರಿಯಾಂಕಾ ಜಾರಕಿಹೊಳಿ ಹಾಗೂ ಯುವ ನಾಯಕರಾದ ಕು. ರಾಹುಲ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿಗೆ ನಿರಂತರ ಆದ್ಯತೆ ನೀಡಲಾಗುತ್ತಿದೆ.

ಶ್ರೀ ಸತೀಶ ಜಾರಕಿಹೊಳಿ ಅವರು ಲೋಕೋಪಯೋಗಿ ಸಚಿವರಾದ ಬಳಿಕ ಯಮಕನಮರಡಿ ಕ್ಷೇತ್ರಕ್ಕೆ 250ಕ್ಕೂ ಹೆಚ್ಚು ಹೊಸ ಶಾಲಾ ಕೊಠಡಿಗಳು ಮಂಜೂರಾಗಿರುವುದು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲೊಂದು ಐತಿಹಾಸಿಕ ಹೆಜ್ಜೆಯಾಗಿದೆ.

ಗುಣಮಟ್ಟದ ಶಿಕ್ಷಣಕ್ಕೆ ಬಲಿಷ್ಠ ಮೂಲಸೌಕರ್ಯ  ಅಭಿವೃದ್ಧಿಯ ಪಥದಲ್ಲಿ ಯಮಕನಮರಡಿ.

ಸಚಿವರ ಶೈಕ್ಷಣಿಕ ಆಪ್ತಸಹಾಯಕರಾದ ಶ್ರೀ ಜಂಗ್ಲಿಸಾಬ ನಾಯಿಕ ಇನ್ನೋರ್ವ ಆಪ್ತಸಹಾಯಕರಾದ ಶ್ರೀ ಲಗಮಣ್ಣಾ ಪಣಗುದ್ದಿ ಊರಿನ ಮುಖಂಡರು, ಗ್ರಾಮಸ್ಥರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.******************************

Leave a Reply

Your email address will not be published. Required fields are marked *

Back to top button