ಪ್ರಕೃತಿ ಬೆಳಗಾವಿ
*ಪಂಡರಪುರ ಪಾದಯಾತ್ರೆಗೆ ಲಖನ ಜಾರಕಿಹೊಳಿ ಹಾಗೂ ಸಂತೋಷ ಜಾರಕಿಹೊಳಿ ಚಾಲನೆ*

ಪ್ರಕೃತಿ ಬೆಳಗಾವಿ ಸುದ್ದಿ : ಗೋಕಾಕ್ : ವಿಧಾನ ಪರಿಷತ್ ಸದಸ್ಯರಾದ ಲಖನ ಜಾರಕಿಹೊಳಿ ಹಾಗೂ ಉದ್ಯಮಿ, ಯುವ ನಾಯಕರಾದ ಸಂತೋಷ ಜಾರಕಿಹೊಳಿ ಅವರು ಭಕ್ತಿಭಾವದಿಂದ ಆಯೋಜಿಸಲಾದ ಪಂಡರಪುರ ಪಾದಯಾತ್ರೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಾದಯಾತ್ರಿಕರನ್ನು ಸನ್ಮಾನಿಸಿ, ಪೂಜೆ ಸಲ್ಲಿಸಿ ಶುಭ ಹಾರೈಸಿದ ಅವರು, ಯಾತ್ರೆಯು ಯಶಸ್ವಿಯಾಗಿ ನೆರವೇರಲಿ ಎಂದು ಆಶಿಸಿದರು. ಬಳಿಕ ಧಾರ್ಮಿಕ ವಿಧಿವಿಧಾನಗಳೊಂದಿಗೆ ಪಾದಯಾತ್ರೆಗೆ ಅಧಿಕೃತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ವಿವಿಧ ಸಂಘಟನೆಗಳ ಮುಖಂಡರು, ಭಕ್ತರು ಹಾಗೂ ನೂರಾರು ಪಾದಯಾತ್ರಿಕರು ಭಾಗವಹಿಸಿ ಧಾರ್ಮಿಕ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದರು.***********************************






