ಪ್ರಕೃತಿ ಬೆಳಗಾವಿ

*ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸುವರ್ಣ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಸೂಚನೆಗಳು*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನೀರಿನ‌ ಸಮಸ್ಯೆ ಬಹಳ‌ ಇದೆ. ಆದ್ದರಿಂದ ಗ್ರಾಮೀಣ ಪ್ರದೆಶದ ಎಲ್ಲ ಶಾಸಕರಿಗೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂಪಾಯಿ ಅನುದಾನ ಘೋಷಣೆ.

• ಸರಕಾರದ ಮಾರ್ಗಸೂಚಿ ಪ್ರಕಾರ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅನುದಾನ ಬಳಕೆ ಮಾಡಬೇಕು.

• ಕೃಷ್ಣಾ, ಕಾವೇರಿ ಹಾಗೂ ಗೋದಾವರಿ ನದಿ ಜೋಡಣೆಗೆ ಒಮ್ಮತದಿಂದ ಒಪ್ಪಿಗೆ ಸೂಚಿಸಲಾಗಿದೆ ಇದೊಂದು ಐತಿಹಾಸಿಕ ನಿರ್ಧಾರ.

• ಕುಡಿಯುವ ನೀರು ಪೂರೈಕೆ‌ ಯೋಜನೆಯ ಪೈಪ್ ಲೈನ್ ಅಳವಡಿಕೆಗೆ ತೊಂದರೆ ಕೊಡಬಾರದು.

• ಬಗರ್ ಹುಕಂ ಸಾಗುವಳಿಗೆ ಸಂಬಂಧಿಸಿದಂತೆ ಅರ್ಜಿ್ ತಿರಸ್ಕಾರ ಅಥವಾ ಒಕ್ಕಲೆಬ್ಬಿಸಬಾರದು.

• ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನದ ಹುಂಡಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿರಂತರ ನಿಗಾ ವಹಿಸಬೇಕು.

• ಅಯೋಧ್ಯೆಯ ರಾಮಮಂದಿರದ ಹುಂಡಿ ಹಣ ದುರ್ಬಳಕೆ ಘಟನೆಯಿಂದ ಎಚ್ಚೆತ್ತಕೊಳ್ಳಬೇಕು. ಮುಜರಾಯಿ ಇಲಾಖೆಯ ದೇವಸ್ಥಾನಗಳ ಹುಂಡಿಗಳ ನಿಗಾ ವಹಿಸಬೇಕು.

• ಮೋಡ ಬಿತ್ತನೆ ಅಧಿಕಾರಿಗಳ‌ಜತೆ ಚರ್ಚಿಸಿ ನಿರ್ಧಾರ

• ರಸ್ತೆ ಕಾಮಗಾರಿಗಳ ಆರಂಭಿಸುವ ಪೂರ್ವ ಹಾಗೂ‌ ನಂತರದ ಫೋಟೋ ದಾಖಲೆಗಳ ಸಮೇತ ಬಿಲ್‌ ಮಾಡಬೇಕು‌

• ಯಾವುದೇ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿರುವುದರ ಫೋಟೋ ದಾಖಲೆ ಇಟ್ಟಿರಬೇಕು‌

• ಬೀದಿಬದಿ ವ್ಯಾಪಾರಸ್ಥರಿಗೆ ಗಾಡಿ ನೀಡಲಾಗುವುದು.

• ಕುಡಿಯುವ ನೀರಿನ ಯೋಜನೆ ಸ್ಥಿತಿಗತಿ ಕುರಿತು ಒಂದು ತಿಂಗಳಲ್ಲಿ ಸರಕಾರಕ್ಕೆ ವರದಿ ನೀಡಬೇಕು.

• ಎಸ್.ಐ.ಆರ್.‌ಬಳಿಕ ವಿಧಾನಮಂಡಳ ಅಧಿವೇಶನ ನಡೆಸಲಾಗುವುದು.

• ಕುಡಿಯುವ ನೀರಿನ ಯೋಜನೆಗಳ ಅನುಷ್ಠಾನಕ್ಕಾಗಿ ತಕ್ಷಣವೇ ಅರಣ್ಯ ಇಲಾಖೆಯವರು ಅನುಮತಿ(ಕ್ಲಿಯರನ್ಸ್) ನೀಡಬೇಕು.

• ಅರ್ಹ ಮತದಾರನ ಹಕ್ಕು ರಕ್ಷಿಸಲು ಎಲ್ಲ ಪಿಡಿಓ ಹಾಗೂ ಬಿ.ಎಲ್.ಓ. ಗಳು ಜಾಗೃತಿ ಮೂಡಿಸಬೇಕು.

• ಗ್ಯಾರಂಟಿ ಯೋಜನೆ ದುರ್ಬಳಕೆಯ ಲೋಪದೋಷಗಳನ್ನು ಸರಿಪಡಿಸಲಾಗುವುದು.

• ಜನರನ್ನು ವಂಚಿಸುವ ಸ್ಕೀಂ ಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಬೇಕು.

• ಗೋವಾ-ಮಹಾರಾಷ್ಟ್ರ ಅಕ್ರಮ ಮದ್ಯ ಹಾಗೂ ಮಾದಕ ವಸ್ತುಗಳ ಸಾಗಾಣಿಕೆ ಮೇಲೆ ನಿಗಾ ವಹಿಸಬೇಕು.

• ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ದಾಸ್ತಾನು ಇಟ್ಟುಕೊಳ್ಳಬೇಕು.

• ಕಾಳಸಂತೆಯಲ್ಲಿ ಗೊಬ್ಬರ ಮಾರಾಟ ತಡೆಗಟ್ಟಬೇಕು.********************************

Leave a Reply

Your email address will not be published. Required fields are marked *

Back to top button