ಪ್ರಕೃತಿ ಬೆಳಗಾವಿ

*ಪಾಲಿಕೆ ವ್ಯಾಪ್ತಿಯಲ್ಲಿ ಇಂದಿನಿಂದ ಎಸ್ ಐ ಆರ್ ಆರಂಭ : ಆಯುಕ್ತ ಕಾರ್ತಿಕ್ ಎಂ.*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಉತ್ತರ ದಕ್ಷಿಣ ಎರಡು ಕ್ಷೇತ್ರಗಳಿದ್ದು, ಜೂನ್ 30 ರಿಂದ ಜುಲೈ 29 ರವರೆಗೆ ಎಸ್ಐಆರ್ ಪ್ರಕ್ರಿಯೆ ನಡೆಯಲಿದೆ ಎಂದು ಪಾಲಿಕೆ ಆಯುಕ್ತ ಕಾರ್ತಿಕ್ ಎಂ ಹೇಳಿದರು.

ಸೋಮವಾರ ಈ ಕುರಿತು ಪಾಲಿಕೆಯ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ದಕ್ಷಿಣ ಉತ್ತರ ಸೇರಿ ಒಟ್ಟು 514 ಮತಗಟ್ಟೆಗಳು ಹಾಗೂ ಮತಗಟ್ಟೆ (ಬಿಎಲ್ಓ)ಅಧಿಕಾರಿಗಳಿದ್ದರೆ.

ಗುರುತಿನ ಚೀಟಿ ಹೊಂದಿರುವ ಬಿ ಎಲ್ ಓ ಗಳು ಮನೆಮನೆಗೆ ಆಗಮಿಸಿ ಇನ್ಯುಮೇರಿಟಿಂಗ್ ಫಾರ್ಮ್ ನೀಡಲಿದ್ದಾರೆ. ವೆಬ್ಸೈಟ್ ಮೂಲಕ ಮಾಹಿತಿ ಪಡೆದು ಫಾರಂ ಭರ್ತಿ ಮಾಡಬೇಕು. ಸಮಸ್ಯೆಗಳು ಉಂಟಾದರೆ ಬಿಎಲ್ಓಗಳು, ಮೇಲಾಧಿಕಾರಿಗಳು ಹಾಗೂ ನಗರಸೇವಕರ ಸಹಾಯ ಪಡೆಯಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಮುಂದುವರೆಯಲು ಮತ್ತು ಮತದಾನದ ಹಕ್ಕನ್ನು ಖಾತರಿಪಡಿಸಿಕೊಳ್ಳಲು ಸಾರ್ವಜನಿಕರು ಫಾರಂ ಅನ್ನು ಭರ್ತಿ ಮಾಡಿ ಹಿಂದಿರುಗಿಸುವುದು ಕಡ್ಡಾಯವಾಗಿದೆ. ಹೊಸ ಯುವ ಮತದಾರರು ಸಹ ಅಗತ್ಯ ಫಾರಂ ಭರ್ತಿ ಮಾಡಿ ನೋಂದಣಿ ಮಾಡಿಕೊಳ್ಳಬಹುದು.

ಚುನಾವಣಾ ಆಯೋಗದ ಆದೇಶದಂತೆ ಈ ಕಾರ್ಯ ನಡೆದಿದ್ದು, ಸಿಬ್ಬಂದಿ ಹಾಗೂ ಸಾರ್ವಜನಿಕರ ಜಂಟಿ ಸಹಯೋಗದಿಂದ ಎಸ್ ಐಆರ್ ಪ್ರಕ್ರಿಯೆ ಸುಗಮವಾಗಲಿದೆ. ಈ ಕುರಿತು ಸಾರ್ವಜನಿಕರಲ್ಲಿ ಯಾವುದೇ ಭಯ ಆತಂಕ ಬೇಡವೆಂದು ಹೇಳಿದರು.**********************************

Leave a Reply

Your email address will not be published. Required fields are marked *

Back to top button