ಬೆಳಗಾವಿಯಲ್ಲಿ ಮತ್ತಷ್ಟು Ponzi ಕಂಪನಿಗಳಿಗೆ ಡಿಸಿ Roshan ಶಾಕ್: 4 ಸಂಸ್ಥೆಗಳು ವಿಚಾರಣೆಗೆ

ಬೆಳಗಾವಿಯಲ್ಲಿ ಪೊಂಜಿ (Ponzi) ಸ್ಕೀಮ್‌ಗಳ ಹಾವಳಿಗೆ ಬ್ರೇಕ್ ಹಾಕಲು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಈಗ ಮುಂದಾಗಿದೆ. ಈಗಾಗಲೇ ಇಂತಹ ಒಂದು ಸಂಸ್ಥೆಯನ್ನು ಬಯಲಿಗೆಳೆದಿದ್ದ ಜಿಲ್ಲಾಧಿಕಾರಿ Md ರೋಶನ್, ಮತ್ತಷ್ಟು 4 ಕಂಪನಿಗಳನ್ನು ಸ್ಕ್ಯಾನರ್‌ಗೆ ಒಳಪಡಿಸಿದ್ದಾರೆ. ಈ ಸಂಬಂಧ ಪೊಲೀಸ್ ಆಯುಕ್ತರ ಜೊತೆ ಚರ್ಚೆ ನಡೆಸಿದ್ದು, ಸದ್ಯದಲ್ಲೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಡಿಸಿ ಕಚೇರಿಯಲ್ಲಿ ಕಳೆದ ತಿಂಗಳಷ್ಟೇ ‘ಸ್ಕ್ಯಾಮ್ ಸೆಲ್’ (Scam Cell) ಸ್ಥಾಪಿಸಲಾಗಿದೆ. ಕೆಪಿಐಡಿ (KPID) ಮತ್ತು ಬಟ್ಸ್ (BATS) ಕಾನೂನುಗಳ ಅಡಿಯಲ್ಲಿ ಕಾರ್ಯನಿರ್ವಹಿಸುವ ಈ ಸೆಲ್, ಜಿಲ್ಲಾಮಟ್ಟದಲ್ಲಿ ವಂಚನೆ ಮಾಹಿತಿಗಳನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳಲು ಬೆಳಗಾವಿ ಡಿಸಿಗೆ ಅಧಿಕಾರ ನೀಡಿದೆ.
ಸೋಶಿಯಲ್ ಮೀಡಿಯಾಗಳಲ್ಲಿ, ಮಾಧ್ಯಮ ವರದಿಗಳು, ಸಾರ್ವಜನಿಕರ ದೂರುಗಳು ಮತ್ತು ಅನಾಮಧೇಯ ಮಾಹಿತಿಗಳನ್ನು ಕೂಡ ಸ್ಕ್ಯಾಮ್ ಸೆಲ್ ಗಂಭೀರವಾಗಿ ಪರಿಗಣಿಸುತ್ತದೆ. ವಂಚನೆ ಕುರಿತ ಪ್ರತಿಯೊಂದು ವಿವರವನ್ನೂ ಕಲೆ ಹಾಕಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ Md ರೋಶನ್ ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಒಂದು ಪೊಂಜಿ ಸ್ಕೀಮ್ ಅನ್ನು ಬಹಿರಂಗಪಡಿಸಲಾಗಿತ್ತು. ಇದರ ಬೆನ್ನಲ್ಲೇ, ಜಿಲ್ಲಾಧಿಕಾರಿ ಕಚೇರಿಯ ಲಿಸ್ಟ್‌ನಲ್ಲಿರುವ ಟಾಪ್ 4 ವಂಚಕ ಸಂಸ್ಥೆಗಳ ಮೇಲೆ ಡಿಸಿ Md ರೋಶನ್ ಈಗ ಕಣ್ಣಿಟ್ಟಿದ್ದಾರೆ. ಇವುಗಳಲ್ಲಿ ಒಂದು ಸಂಸ್ಥೆ ತಿಂಗಳಿಗೆ 5% ಬಡ್ಡಿ ನೀಡುವುದಾಗಿ ಆಮಿಷವೊಡ್ಡುತ್ತಿದೆ ಎಂದು ಮಾಹಿತಿಬಂದಿದೆ.
ಈ ಕುರಿತು ಪೊಲೀಸ್ ಆಯುಕ್ತರೊಂದಿಗೆ ಚರ್ಚಿಸಿದ್ದು, ಡಿಸ್ಕ್ರೀಟ್ ಎನ್‌ಕ್ವೈರಿ (Discrete Inquiry) ನಡೆಸಲಾಗುತ್ತಿದೆ. ತನಿಖಾ ವರದಿ ಬಂದ ನಂತರ ಕೆಪಿಐಡಿ ಕಾನೂನಿನಡಿ ನೋಟಿಸ್ ಜಾರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ರೋಶನ್ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ಇಂತಹ ಯಾವುದೇ ಸ್ಕೀಮ್‌ಗಳಿಗೆ ಅಡಿಕ್ಟ್ ಆಗಬಾರದು ಎಂದು ಡಿಸಿ ಎಚ್ಚರಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ದೊಡ್ಡ ಬ್ಯಾಂಕುಗಳೇ 8-9% ಮೀರಿ ಬಡ್ಡಿ ನೀಡಲಾಗದಿದ್ದಾಗ, ಯಾರೋ ತಿಂಗಳಿಗೆ 5% ಕೊಡ್ತೀನಿ ಅಂದರೆ ಅದು ಸಂಪೂರ್ಣ ವಂಚನೆ ಗೇಮ್ ಪೇನ್ ಎಂದಿದ್ದಾರೆ.
ಹಿಂದೆ ಮೈಕ್ರೋ ಫೈನಾನ್ಸ್ ಸ್ಕ್ಯಾಮ್‌ಗಳಾದಾಗ, ಜನರು ಹಣ ಕಳೆದುಕೊಂಡ ನಂತರ ದೂರು ನೀಡಲು ಬರುತ್ತಿದ್ದರು. ಆದರೆ, ಈಗ ವಂಚನೆ ಆರಂಭಿಕ ಹಂತದಲ್ಲಿದ್ದಾಗಲೇ ಅದನ್ನು ತಡೆಯಲು ಪ್ರಯತ್ನಿಸುತ್ತಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ.
ಮುಂದಿನ 2-3 ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು. ಪೊಂಜಿ ಸ್ಕೀಮ್‌ಗಳಿಂದ ಇಡೀ ಜಿಲ್ಲೆಯನ್ನು ಮುಕ್ತಗೊಳಿಸಿ, ಠೇವಣಿದಾರರ ಹಣವನ್ನು ಸುರಕ್ಷಿತವಾಗಿರಿಸಿ, ಅದನ್ನು ವಾಪಸ್ ಕೊಡಿಸುವ ಜವಾಬ್ದಾರಿ ನಮ್ಮದು ಎಂದು ಡಿಸಿ ಭರವಸೆ ನೀಡಿದ್ದಾರೆ.
ವಂಚನೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಯಾವುದು?
- ಕೆಪಿಐಡಿ (KPID) ಕಾನೂನಿನ 2025ರ ತಿದ್ದುಪಡಿ ಮೂಲಕ ಜಿಲ್ಲಾಧಿಕಾರಿಗೆ ವಂಚನೆ ನಿಯಂತ್ರಣಕ್ಕೆ ಹೆಚ್ಚಿನ ಅಧಿಕಾರ ಈಗ ನೀಡಲಾಗಿದೆ.
- ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ತಿಂಗಳು ‘ಸ್ಕ್ಯಾಮ್ ಸೆಲ್’ (Scam Cell) ಸ್ಥಾಪನೆ ಈಗ ಮಾಡಲಾಗಿದೆ.
- ಈ ಸೆಲ್ ಸಾಮಾಜಿಕ ಮಾಧ್ಯಮ, ಮಾಧ್ಯಮ ವರದಿಗಳು ಹಾಗೂ ಸಾರ್ವಜನಿಕರ ದೂರುಗಳ ಆಧಾರದ ಮೇಲೆ ವಂಚನೆ ಕುರಿತ ಮಾಹಿತಿ ಕಲೆಕ್ಟ್ ಮಾಡಲಾಗುತ್ತದೆ.











