ಪ್ರಕೃತಿ ಬೆಳಗಾವಿ

*ಸರಕಾರಿ ಪ್ರೌಢ ಶಾಲೆ ಅಲಖನೂರಿನಲ್ಲಿ ಇಂದು ವೃತ್ತಿ ಮೇಳ ನಡೆಸಲಾಯಿತು* 

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ಇಂದು ವೃತ್ತಿ ಮೇಳ ನಡೆಯಿತು ಶಾಲೆಯ ಮಕ್ಕಳು ಅವರ ಕನಸಿನ ಉದ್ಯೋಗ ಅದಕ್ಕೆ ಬೇಕಾದ ತಯಾರಿ ಕುರಿತು ವಾಲ್ ಪೋಸ್ಟ್ ಎಕ್ಸಿಬಿಷನ್ ಮಾಡಿರುವ ಮತ್ತು ಅದರ ಕುರಿತು ಮಾತನಾಡಿದರು, ಮುಖ್ಯ ಅತಿಥಿಗಳಾಗಿ ಕೇಂದ್ರೀಯ ವಿಶ್ವವಿದ್ಯಾಲಯ ಸಂಶೋಧಕ ಅಜೀತ ಪಾತ್ರೋಟ ಅವರು ವೃತ್ತಿಪರ ಕೋರ್ಸ್ಗಳಗಳ ಕುರಿತು ಮಾಹಿತಿ ನೀಡಿದರು.

ಶಾಲಾ ಹಂತದ ಶಿಕ್ಷಣದ ನಂತರ ಏನೆಲ್ಲಾ ಅವಕಾಶಗಳಿವೆ ಮತ್ತು ಸರ್ಕಾರಿ ನೌಕರಿ ಹೊರತು ಪಡಿಸಿ ವೃತ್ತಿಗಳು ಯಾವುವು ಅವುಗಳ ತಯಾರಿ ಹೇಗೆ ವೃತ್ತಿಪರ ಕೋರ್ಸ್ಗಳ ಆಯ್ಕೆ ಹೇಗೆ ಎಂಬ ಸುಧೀರ್ಘ ಮಾಹಿತಿ ಹಂಚಿಕೊಂಡರು.

ಲೈನ್ ಮೆನ್ ಹುದ್ದೆಯಲ್ಲಿರುವ ಕರೆಪ್ಪ ಹೆಗಡೆ ಅವರು ಹತ್ತನೇ ತರಗತಿಯಲ್ಲಿ ಅಂಕಗಳು ಮುಂದಿನ ಭವಿಷ್ಯದಲ್ಲಿ ಉದ್ಯೋಗ ಹೇಗೆ ನಿರ್ಧರಿಸುತ್ತವೆ ಮತ್ತು ಬಡತನದಲ್ಲಿ ಸಾಧನೆ ಹೇಗೆ ಆಗು ಮಾಡಿಕೊಳ್ಳಬೇಕು ಎಂಬ ಮಾಹಿತಿ ನೀಡಿದರು.

ಸರ್ಕಾರಿ ಶಾಲೆಯ ಮುಖ್ಯೂಪಾಧ್ಯಯರಾದ ಪಿ.ಬಿ. ಪಾಲಯ್ಯ ಅವರು ಅಧಕ್ಷೀಯ ಮಾತುಗಳನ್ನು ಆಡಿದರು, ಮತ್ತು ಹಿಂದಿ ಶಿಕ್ಷಕಿ ಶ್ರೀಮತಿ ಎ.ಬಿ ಗೌಂಡಿ, ದೈಹಿಕ ಶಿಕ್ಷಕ ಶ್ರೀ ಬನಾಜ ಅವರು ಮತ್ತು ವಿಜ್ಞಾನ, ಕನ್ನಡ, ಗಣಿತ, ಇಂಗ್ಲಿಷ್ ಶಿಕ್ಷಕರು ಊರಿನ ಹಿರಿಯರು ಶಾಲಾ ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.*******************************

Back to top button