*ಗ್ಯಾಸ್ ಸರಬರಾಜು ಕುರಿತು ಗೊಂದಲ ಸೃಷ್ಟಿ: ಏಜೆನ್ಸಿ ವಿರುದ್ಧ ಸಾರ್ವಜನಿಕರ ಆಕ್ರೋಶ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ನಗರದ ವೈಭವ್ ನಗರದಲ್ಲಿರುವ ನಿರ್ಮಲ ಗ್ಯಾಸ್ ಏಜೆನ್ಸಿಯ ವರ್ತನೆ ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿರುವ ಘಟನೆ ಬೆಳಕಿಗೆ ಬಂದಿದೆ.
ವೈಭವ್ ನಗರದಲ್ಲಿರುವ ಈ ಗ್ಯಾಸ್ ಏಜೆನ್ಸಿಗೆ +919462197858 ನಂಬರಗೆ ಸಂಪರ್ಕಿಸಿದ ಸಾರ್ವಜನಿಕರು ಗ್ಯಾಸ್ ಬುಕ್ಕಿಂಗ್ ಮಾಡಿದ ನಂತರ ಸರಬರಾಜು ಯಾವಾಗ ನಡೆಯುತ್ತದೆ ಎಂದು ವಿಚಾರಿಸಿದಾಗ, ಸಂಬಂಧಿಸಿದ ವ್ಯಕ್ತಿ “ಲಾಕ್ಡೌನ್ ಇರುವ ಕಾರಣ ಈಗ ಗ್ಯಾಸ್ ಸರಬರಾಜು ಸಾಧ್ಯವಿಲ್ಲ” ಎಂದು ಹೇಳುತ್ತಿರುವುದಾಗಿ ಆರೋಪಿಸಲಾಗಿದೆ. ಆದರೆ ದೇಶದಲ್ಲಿ ಯಾವುದೇ ಲಾಕ್ಡೌನ್ ಜಾರಿಯಲ್ಲಿಲ್ಲದಿರುವ ಸಂದರ್ಭದಲ್ಲಿ ಈ ರೀತಿಯ ಉತ್ತರ ನೀಡಲಾಗುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ.
ಸಾರ್ವಜನಿಕರು ಪ್ರಶ್ನಿಸಿದಾಗಲೂ ಸ್ಪಷ್ಟ ಉತ್ತರ ನೀಡದೆ “ಗ್ಯಾಸ್ ಬರಲ್ಲ” ಎಂಬ ನಿಲುವನ್ನು ತಾಳುತ್ತಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಈ ರೀತಿಯ ತಪ್ಪು ಮಾಹಿತಿ ನೀಡುವ ಮೂಲಕ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇಂತಹ ಅವಹೇಳನಕಾರಿ ಹಾಗೂ ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಏಜೆನ್ಸಿಗಳ ವಿರುದ್ಧ ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೇ ವೇಳೆ, ಜಿಲ್ಲೆಯಲ್ಲಿಯೇ ಅಡುಗೆ ಅನಿಲ ಕೊರತೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಇತ್ತೀಚೆಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿರುವುದು ಗಮನಾರ್ಹ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಒಳಗಾಗದೆ, ಸಮಸ್ಯೆಗಳಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ಜಿಲ್ಲಾಡಳಿತ ಈ ಪ್ರಕರಣದ ಕುರಿತು ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.****************************






