*ರಾಣಿ ಚೆನ್ನಮ್ಮ ವೃತ್ತದ ಬಳಿ ಕರ್ನಾಟಕ ರಕ್ಷಣಾ ಟೈಗರ್ಸ್‌ನಿಂದ ಅದ್ದೂರಿ ರಾಜ್ಯೋತ್ಸವ ಆಚರಣೆ*

*ಕನ್ನಡಿಗರಲ್ಲಿ ನಾಡು-ನುಡಿಯ ಅಭಿಮಾನ, ಶಕ್ತಿ ತುಂಬಿದ ಸಂಘಟನೆಯ ಪದಾಧಿಕಾರಿಗಳು*
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನವೆಂಬರ್ 1, 2026ರಂದು ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ವತಿಯಿಂದ ನಗರದ ರಾಣಿ ಚೆನ್ನಮ್ಮ ವೃತ್ತದ ಸಮೀಪ, ಪಾಲಿಟೆಕ್ನಿಕ್ ಕಾಲೇಜು ಎದುರುಗಡೆ ವಿಶೇಷ ವೇದಿಕೆ ನಿರ್ಮಿಸಿ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲಾಯಿತು.
ಸಂಘಟನೆಯ ಎಲ್ಲ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡಿಗರಲ್ಲಿ ನಾಡು, ನುಡಿ, ನೆಲ ಮತ್ತು ಜಲದ ಅಭಿಮಾನವನ್ನು ಜಾಗೃತಗೊಳಿಸಿ, ಕನ್ನಡದ ಶಕ್ತಿ ಹಾಗೂ ಒಗ್ಗಟ್ಟಿನ ಸಂದೇಶ ಸಾರಲಾಯಿತು. ರಾಜ್ಯೋತ್ಸವದ ಸಂಭ್ರಮದಲ್ಲಿ ಕನ್ನಡಾಭಿಮಾನಿಗಳು ಉತ್ಸಾಹದಿಂದ ಪಾಲ್ಗೊಂಡು ಕನ್ನಡದ ಹಬ್ಬಕ್ಕೆ ಮೆರುಗು ತಂದರು.
ಕರ್ನಾಟಕ ರಕ್ಷಣಾ ಟೈಗರ್ಸ್ ಸಂಘಟನೆಯ ಅಧ್ಯಕ್ಷ ಬಾಳಪ್ಪ ಬಿ. ಗುಡಗೇನಟ್ಟಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘಟನೆಯ ವಿವಿಧ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ವೇದಿಕೆಯಲ್ಲಿ ಕನ್ನಡದ ಅಭಿಮಾನ, ಸಂಘಟನೆಯ ಒಗ್ಗಟ್ಟು ಹಾಗೂ ಕನ್ನಡ ನಾಡಿನ ಗೌರವವನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳು ಗಮನ ಸೆಳೆದವು.
ಕನ್ನಡಿಗರಲ್ಲಿ ನಾಡು-ನುಡಿಯ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿಸಿ, ಕನ್ನಡದ ಪರವಾಗಿ ಸಂಘಟಿತವಾಗಿ ನಿಲ್ಲುವ ಸಂದೇಶದೊಂದಿಗೆ ಕರ್ನಾಟಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.*****************************






