ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ನವೀಕರಣಗೊಂಡ ಫುಟಗಾಂವ ಬಡ್ನಿ ಸಿ ಆರ್ ಸಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮ…!!
ಪ್ರಕೃತಿ ಬೆಳಗಾವಿ ಸುದ್ದಿ : ಶೈಕ್ಷಣಿಕ ಮಟ್ಟ ಸುಧಾರಣೆ, ಶಿಕ್ಷಕರ ಜ್ಞಾನ ಹೆಚ್ಚಳ, ಇಲಾಖೆ ಕಾರ್ಯಕ್ರಮ, ಸಮಾಲೋಚನೆ ಮತ್ತಿತರ ಮಹತ್ವದ ಉದ್ದೇಶ ಈಡೇರಿಕೆಗಾಗಿ ಲಕ್ಷ್ಮೇಶ್ವರ ತಾಲೂಕಿನ ಫುಟಗಾಂವ ಬಡ್ನಿ ಗ್ರಾಮದಲ್ಲಿ ಸ್ಥಾಪಿಸಿದ ಸಮೂಹ ಸಂಪನ್ಮೂಲ ಕೇಂದ್ರವು ಕಳೆದ ಹಲವು ವರ್ಷಗಳಿಂದ ಪಾಳು ಬಿದ್ದು ಅನಾಥ ಭಾವ ಕಾಡುತ್ತಿತ್ತು.ಇದೀಗ ಹಾಳಾಗುತ್ತಿರುವ ಕಟ್ಟಡಗಳನ್ನು ದುರಸ್ಥಿಪಡಿಸುವ ಬಗ್ಗೆ ಆಸಕ್ತಿ ತೋರಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬಿಆರ್‌ಪಿಗಳು ನೀಡಿದ ಸಲಹೆ-ಸೂಚನೆ ಹಿನ್ನಲೆಯಲ್ಲಿ ಪ್ರೇರಿತರಾದ ಫುಟಗಾಂವ ಬಡ್ನಿ ಕ್ಲಸ್ಟರ್ ಸಿಆರ್‌ಪಿ ಯವರಾದ ಗಿರೀಶ್ ನೇಕಾರ ಮತ್ತು ಸ್ಥಳೀಯ ಕ್ಲಸ್ಟರಿನ ಸಂಬಂಧಿತ ಮುಖ್ಯ ಶಿಕ್ಷಕರು, ಶಿಕ್ಷಕರ ಸಹಾಯ-ಸಹಕಾರದಿಂದ ಈ ಕಟ್ಟಡಕ್ಕೆ ಜೀವ ನೀಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶಿರಹಟ್ಟಿ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಮಾನ್ಯಶ್ರೀ ಡಾ ಚಂದ್ರು ಲಮಾಣಿ ಅವರು ನವೀಕರಣಗೊಂಡ ಫುಟಗಾಂವ ಬಡ್ನಿ ಸಮೂಹ ಸಂಪನ್ಮೂಲ ಕೇಂದ್ರದ ಕೊಠಡಿ ಉದ್ಘಾಟನೆ ಮಾಡಿ ಮಾತನಾಡಿದರು.
ಫು ಬಡ್ನಿ ಸಿಆರ್‌ಸಿ ಕೇಂದ್ರವನ್ನು ಸಿಆರ್‌ಪಿ ಅವರ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ 1 ಲಕ್ಷ ರೂ.ಗಿಂತ ಹೆಚ್ಚಿನ ಹಣ ಖರ್ಚು ಮಾಡಿ ನವೀಕರಣಗೊಳಿಸಿದ್ದಾರೆ.
ಪು.ಬಡ್ನಿಯಲ್ಲಿ ಹಾಳಾಗಿದ್ದ ಕಟ್ಟಡವನ್ನು ಸಿಆರ್‌ಪಿ ಗಿರೀಶ ನೇಕಾರ 1.15 ಲಕ್ಷ ರೂ ವೆಚ್ಚದಲ್ಲಿ ನವೀಕರಣಗೊಳಿಸಿದ್ದಾರೆ.
ದೊಡ್ಡೂರ ಮತ್ತು ಬೆಳ್ಳಟ್ಟಿ, ಹೆಬ್ಬಾಳ ಕ್ಲಸ್ಟರಿನ ಕಟ್ಟಡಗಳು ನವೀಕರಣಗೊಂಡಿವೆ.ಶಿಗ್ಲಿಯಲ್ಲಿ ಜ್ಯೋತಿ ಗಾಯಕವಾಡ, ಲಕ್ಷೇಶ್ವರದಲ್ಲಿ ಉಮೇಶ ನೇಕಾರ,ಸೂರಣಗಿಯಲ್ಲಿನ ಕಟ್ಟಡವನ್ನು ಲೊಕೇಶ ಮಠದ ನೇತೃತ್ವದಲ್ಲಿ ನವೀಕರಣಕ್ಕೆ ಅಣಿಯಾಗಿರುವುದು ಶ್ಲಾಘನೀಯ.
ಶಾಲೆಯನ್ನು ದೇವಾಲಯವೆಂದು,ಮಕ್ಕಳನ್ನೇ
ದೇವರೆಂದು ಪೂಜ್ಯನೀಯಭಾವನೆಯಿಂದಶಿಕ್ಷಣ ಸೇವೆ
ಮಾಡುವಶಿಕ್ಷಕರು ತಮ್ಮ ಒಂದುಸಲಹೆಯನ್ನು ಅತ್ಯಂತ
ಆಸಕ್ತಿಯಿಂದಸ್ವೀಕರಿಸಿ ಕ್ಷೇತ್ರವ್ಯಾಪ್ತಿಯಲ್ಲಿ
ಶಿಥಿಲಗೊಳ್ಳುತ್ತಿರುವ ಸಿಆರ್‌ಸಿ ಕಟ್ಟಡಗಳನ್ನು ತಮ್ಮ
ಸ್ವಂತದಮತ್ತು ಅಲ್ಪದಾನಿಗಳ ಸಹಾಯದಿಂದ
ಅಭಿವೃದ್ಧಿಗೊಳಿಸುವಮೂಲಕ ಇಲಾಖೆಯ ಅಳಿಲು ಸೇವೆ
ಮಾಡಿರುವುದುಖುಷಿ ತಂದಿದೆ.ಪಾಲುದಾರ ಎಲ್ಲ
ಸಿಆರ್‌ಪಿ ಮತ್ತು ಶಿಕ್ಷಕವೃಂದಕ್ಕೆ ಅಭಿನಂದನೆ ಸಲ್ಲಿಸುವೆ ಎಂದು ಬಿ ಇ ಓ ಜಿ ಎಮ್ ಮುಂದಿನಮನಿ ಹೇಳಿದರು.
ಹಾಗೆಯೇ ಈ ದಿನ ಫುಟಗಾಂವ ಬಡ್ನಿ ಕ್ಲಸ್ಟರನ ಮುಖ್ಯಶಿಕ್ಷಕರ ಕಾರ್ಯಾಗಾರದಲ್ಲಿ ಬಿ ಆರ್ ಪಿ ಯವರಾದ ಈಶ್ವರ ಎಸ್ ಮೆಡ್ಲೇರಿ,ಬಸವರಾಜ ಎಮ್ ಯರಗುಪ್ಪಿ ಮತ್ತು ವಾಸು ದೀಪಾಲಿ ಅವರು ಶಿಕ್ಷಣ ಇಲಾಖೆಯಲ್ಲಿನ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಕಾರ್ಯಚಟುವಟಿಕೆಗಳಾದ 5,8 ಮತ್ತು 9 ನೇ ತರಗತಿ ಮೌಲ್ಯಾಂಕನ ಪೂರ್ವ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು? ಎಂಬ ವಿಷಯದ ಕುರಿತು ಮತ್ತು ಮುಖ್ಯ ಗುರುಗಳು ತಮ್ಮ ಶಾಲೆಯಲ್ಲಿ ನಿರ್ವಹಿಸುವ ಜವಾಬ್ದಾರಿಗಳ ಕುರಿತು ಹೇಳಿದರು.
ಇದೇ ಸಂದರ್ಭದಲ್ಲಿ ಫು ಬಡ್ನಿ ಶಾಲೆಯ ನೂತನ ಎಸ್ ಡಿ ಎಮ್ ಸಿ ಪದಾಧಿಕಾರಿಗಳನ್ನು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮಾನ್ಯ ಶಿರಹಟ್ಟಿಯ ಜನಪ್ರಿಯ ಶಾಸಕರಾದ ಡಾ.ಚಂದ್ರು ಲಮಾಣಿ, ಗ್ರಾಮ ಪಂಚಾಯತಿ ಅಧ್ಯಕ್ಷಿಣಿಯರಾದ ಶ್ರೀಮತಿ ಪ್ರೇಮಕ್ಕ ಮಾದರ,
ಬಿ ಇ ಓ ಜಿ ಎಮ್ ಮುಂದಿನಮನಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ರಮೇಶ ಮರಿಹೊಳಲಣ್ಣನವರ, ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು,
ಶಿಕ್ಷಣಾಧಿಕಾರಿಗಳ ಸಂಘದ ಅಧ್ಯಕ್ಷರಾದ ಎಮ್ ಬಿ ಹೊಸಮನಿ, ಲಕ್ಷ್ಮೇಶ್ವರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಡಿ ಎಚ್ ಪಾಟೀಲ, ಲಕ್ಷ್ಮೇಶ್ವರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಿ ಎಸ್ ಹರ್ಲಾಪೂರ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ನೇಕಾರ, ಸದಸ್ಯರಾದ ಶ್ರೀಮತಿ ಎಲ್ ಎನ್ ನಂದೆಣ್ಣವರ, ಡಿ ಡಿ ಲಮಾಣಿ, ಬಿ ಬಿ ಯತ್ತಿನಹಳ್ಳಿ. ಶಾಲೆಯ ಪ್ರಭಾರಿ ಪ್ರಧಾನ ಗುರುಗಳಾದ ವಾಯ್ ಎಸ್ ತಿರಕಣ್ಣವರ ಹಾಗೂ ಈ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಬಿ ಆರ್ ಪಿ ಐ ಎಸ್ ಮೆಡ್ಲೇರಿ, ಬಿ ಎಮ್ ಯರಗುಪ್ಪಿ, ವಿ ಎಚ್ ದೀಪಾಳಿ ಮತ್ತು ಸಿ ಆರ್ ಪಿ ಗಳಾದ ಸಿ ವಿ ವಡಕಣ್ಣವರ, ಜಿ ಆರ್ ಪಾಟೀಲ, ಎನ್ ಎನ್ ಸಾವಿರಕುರಿ,ಕೆಂಚಮ್ಮ ಕಂಬಳಿ, ಜ್ಯೋತಿ ಗಾಯಕವಾಡ, ಉಮೇಶ್ ನೇಕಾರ, ಗಿರೀಶ್ ನೇಕಾರ, ಸತೀಶ್ ಬೊಮಲೆ, ಎಲ್ ಎಫ್ ಮಠದ, ತಿರಕಪ್ಪ ಪೂಜಾರ, ಎಸ್ ಎನ್ ಪಶುಪತಿಹಾಳ, ಎನ್ ಎ ಮುಲ್ಲಾ , ಪ್ರಧಾನ ಗುರುಗಳಾದ ಎ ಡಿ ಸೋಮನಕಟ್ಟಿ,ಎಸ್ ಆರ್ ಪೂಜಾರ, ಆರ್ ಎಮ್ ಕಮ್ಮಾರ, ಹಾಗೂ ಶಾಲೆಯ ಸರ್ವ ಸಿಬ್ಬಂದಿ ಮತ್ತು ಮಕ್ಕಳು ಹಾಜರಿದ್ದರು.****************************






