*ಚಿಕ್ಕೋಡಿ ಪತ್ರಕರ್ತನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ*

ಪ್ರಕೃತಿ ಬೆಳಗಾವಿ ಸುದ್ದಿ : ಚಿಕ್ಕೋಡಿ : ಕನ್ನಡಮ್ಮ ದಿನಪತ್ರಿಕೆಯ ಸುದ್ದಿವಾಹಿನಿ ಕೆಎಂಎಂ ವರದಿಗಾರ ಅಜೀತ ಖೋತ ಮೇಲಿನ ಹಲ್ಲೆ ಖಂಡಿಸಿ ಸೋಮವಾರ ಚಿಕ್ಕೋಡಿ ತಹಶೀಲ್ದಾರ್ ಗೆ ಚಿಕ್ಕೋಡಿ ಪತ್ರಕರ್ತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಸಂವಿಧಾನದ ನಾಲ್ಕನೇ ಅಂಗ ಪತ್ರಿಕಾರಂಗ ಸಮಾಜದಲ್ಲಿ ನಡೆಯುವ ಆಗು ಹೋಗುಗಳನ್ನು ಅನ್ಯಾಯದ ಬಗ್ಗೆ ಧ್ವನಿ ಎತ್ತುವರು ಪತ್ರಕರ್ತರು ಜೀವದ ಹಂಗು ತೊರೆದು ಸುದ್ದಿ ಎಲ್ಲೆಡೆ ಸುದ್ದಿ ಮಾಡಲು ತೆರಳುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ಮಾಧ್ಯಮದವರ ಮೇಲೆ ಹಲ್ಲೆ ನಡೆಯುತ್ತವೆ ಇದು ಖಂಡನೀಯ ಚಿಕ್ಕೋಡಿ ಪತ್ರಕರ್ತನ ಮೇಲೆ ನಡೆದಿದೆ.
ಚಿಕ್ಕೋಡಿ ತಾಲೂಕಿನ ಖಜಗೌಡನಹಟ್ಟಿ ಗ್ರಾಮದಲ್ಲಿ ಜಮೀನು ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಸ್ತಿ ಕುಟುಂಬಗಳ ನಡುವೆ ನಡೆದ ಗಲಾಟೆ ಕುರಿತು ಸುದ್ದಿ ಮಾಡಲು ತೆರಳಿದ್ದ ಕನ್ನಡಮ್ಮ ದಿನಪತ್ರಿಕೆಯ KMM ಸುದ್ದಿ ವಾಹಿನಿಯ ವರದಿಗಾರ ಅಜೀತ ಖೋತ ಮೇಲೆ ದುಂಡಪ್ಪ, ಲಗಮಣ್ಣ, ಮುತ್ತಣ್ಣ ಮಸ್ತಿ ಎಂಬುವವರು ಸೇರಿ ಬೈಕ್ ಅಡ್ಡಗಡ್ಡಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ವರದಿಗಾರನ ತಲೆಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಮಾಧ್ಯಮದವರ ಮೇಲೆ ಹಲ್ಲೆಗಳು ಹೆಚ್ಚಾಗುತ್ತಿದ್ದು ಪತ್ರಕರ್ತರ ಜೀವಕ್ಕೆ ರಕ್ಷಣೆ ಇಲ್ಲದಂತೆ ಆಗಿದೆ. ಆದರಿಂದ ಅಂತವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಪತ್ರಕರ್ತರಿಗೆ ರಕ್ಷಣೆ ಕೊಡಬೇಕು ಎಂದು ಚಿಕ್ಕೋಡಿ ಪತ್ರಕರ್ತರ ಬಳಗದಿಂದ ತಹಶೀಲ್ದಾರ್ ಮೂಲಕ, ಎಸಿ, ಡಿಸಿ, ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.*********************************






