ಪ್ರಕೃತಿ ಬೆಳಗಾವಿ

*ಅಪರಿಚಿತ ವೃದ್ಧನ ಚಿಕಿತ್ಸೆ ಫಲಿಸದೆ ಸಾವು: ವಾರಸುದಾರರಿಗಾಗಿ ಕಾಕತಿ ಪೊಲೀಸರ ಮನವಿ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಸಮೀಪದ ಹೊಸ ವಂಟಮೂರಿ ಗ್ರಾಮದ ಹತ್ತಿರ ಅಶಕ್ತ ಸ್ಥಿತಿಯಲ್ಲಿ ಬಿದ್ದಿದ್ದ ಸುಮಾರು 75 ವರ್ಷದ ಅಪರಿಚಿತ ವೃದ್ಧನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ.
ದಿ. 08.03.2026 ರಂದು ಹೊಸ ವಂಟಮೂರಿ ಗ್ರಾಮದ ಸಮೀಪ ಈ ವೃದ್ಧನು ಅಸ್ವಸ್ಥ ಸ್ಥಿತಿಯಲ್ಲಿ ಕಂಡುಬಂದಿದ್ದು, ಸ್ಥಳೀಯರ ಮಾಹಿತಿಯ ಮೇರೆಗೆ ಅವರನ್ನು ವೈದ್ಯಕೀಯ ಚಿಕಿತ್ಸೆಗೆ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿ. 11.03.2026 ರಂದು ಅವರು ಮೃತಪಟ್ಟಿದ್ದಾರೆ.

ಮೃತ ವ್ಯಕ್ತಿಯ ಗುರುತು ಪತ್ತೆಯಾಗದಿರುವ ಹಿನ್ನೆಲೆ, ಅವರ ವಾರಸುದಾರರು ಅಥವಾ ಪರಿಚಯಸ್ಥರು ಯಾರಾದರೂ ಇದ್ದರೆ ಕಾಕತಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ:
ಕಾಕತಿ ಪೊಲೀಸ್ ಠಾಣೆ
ದೂರವಾಣಿ: 0831-2405203
ಮೊಬೈಲ್: 9480804115, 9480804083, 7795699847
ಯಾರಾದರೂ ಈ ವ್ಯಕ್ತಿಯನ್ನು ಗುರುತಿಸಿದರೆ ತಕ್ಷಣ ಕಾಕತಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಲಾಗಿದೆ.*******************************

Leave a Reply

Your email address will not be published. Required fields are marked *

Back to top button