*ಬಡಾಲ ಅಂಕಲಗಿಯಲ್ಲಿ ಮರಗಳ ಮಾರಣಹೋಮ ತಪ್ಪಿಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ತಾಲೂಕಿನ ಬಡಾಲ ಅಂಕಲಗಿಯಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡುವ ನೇಪದಲ್ಲಿ ಸಾವಿರಾರು ಮರಗಳ ಮಾರಣಹೋಮ ಮಾಡಲಾಗಿದೆ. ಬಡಾಲ ಅಂಕಲಗಿ ಅರಣ್ಯದಲ್ಲಿ 6೦೦ ಎಕರೆ ಪ್ರದೇಶದಲ್ಲಿ ಸುಮಾರು 45 ಎಕರೆ ಶ್ರೀಗಂಧ ಮತ್ತು ಬೇರೆ 20000 ಹೆಚ್ಚು ಗಿಡಗಳನ್ನು ಕಟಾವು ಮಾಡಲಾಗಿದೆ ಎಂದು ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಅಣ್ಣಾಗೌಡ ಸಿ ಪಾಟೀಲ ಆರೋಪಿಸಿದರು.
ಹೆಸ್ಕಾಂ ಮೇಲಾಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ತಶಿಲ್ದಾರ್ಗಳು ಜಿಲ್ಲಾ ಆಡಳಿತ ಅಧಿಕಾರಿಗಳು ಇದಕ್ಕೆ ಹೊಣೆಗಾರರು ಈ ಪ್ರಾಜೆಕ್ಟ್ ಅಲ್ಲಿ ನಿಲ್ಲಿಸಬೇಕು ಮತ್ತು ಈ ಸಂಬಂಧ ಪಟ್ಟ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಬೇಕು ಇದಲ್ಲದೆ ಚಂದನ್ ಗಿಡಗಳ ಸರ್ವೆ ಮಾಡಿದ್ದಾರೆ.
ನೂರರಿಂದ ಎರಡು ನೂರು ಕೋಟಿ ಬೆಲೆ ಆಗಬಹುದು ಆದ್ದರಿಂದ ಈ ಅಧಿಕಾರಿಗಳಿಂದ ಈ ದುಡ್ಡನ್ನು ರಿಕವರಿ ಮಾಡಲೇಬೇಕು ಈ ಸೋಲಾರ್ ಪ್ರಾಜೆಕ್ಟ್ ನಲ್ಲಿ ಅಧಿಕಾರಿಗಳು ದುಡ್ಡಿನ ದುರುಪಯೋಗ ಮಾಡಿದ್ದಾರೆ ಈ ಪ್ರಕಣದಲ್ಲಿ ಯಾರು ಭಾಗಿಯಾದ್ದಾರೆ ಹಂತವರ ಮೇಲೆ ಕೂಡಲೇ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಡಳಿತಕ್ಕೆ ಹಾಗೂ ಅರಣ್ಯ ಇಲಾಖೆಗೆ ಮನವಿಯನ್ನು ಮಾಡಿಕೊಂಡಿದ್ದಾರೆ.
ಇಲ್ಲವಾದಲ್ಲಿ ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆಯ ವಿರುದ್ದ ಉಗ್ರವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆಯತನ್ನು ನೀದಿದರು.*****************************






