ಪ್ರಕೃತಿ ಬೆಳಗಾವಿ

*ಡೆಲ್ಲಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಕುಸ್ತಿ ವಿಭಾಗದಲ್ಲಿ ಪ್ರಭಾವತಿ ಲಂಗೂಟಿ ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಫೆ.05 : ದಿಲ್ಲಿಯ ಛತ್ರಿ ಶಾಲಾ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಜರುಗಿದ ಎಸ್‍ ಜಿ ಎಫ್‍ ಐ ರಾಷ್ಟ್ರೀಯ ಚಾಂಪಿಯನ್‍ ಶಿಫ್‍ನಲ್ಲಿ 39 ಕೆಜಿ ಕುಸ್ತಿ ವಿಭಾಗದಲ್ಲಿ ಧಾರವಾಡ ಕ್ರೀಡಾಶಾಲೆಯ ಪ್ರಭಾವತಿ ಲಂಗೂಟಿ ಅವರು ಸತತ ಎರಡನೇ ವರ್ಷವೂ ಪ್ರಥಮ ಸ್ಥಾನ ಪಡೆದು ಧಾರವಾಡ ಕ್ರೀಡಾ ವಸತಿ ನಿಲಯಕ್ಕೂ ಹಾಗೂ ಕರ್ನಾಟಕ ರಾಜ್ಯಕ್ಕೂ ಕೀರ್ತಿಯನ್ನು ತಂದಿದ್ದಾರೆ.

ಚಿನ್ನದ ಪದಕ ವಿಜೇತೆಯಾದ ಪ್ರಭಾವತಿ ಲಂಗೂಟಿ ಅವರನ್ನು ನಿನ್ನೆ (ಫೆ.04) ಸಂಜೆ ಜಿಲ್ಲಾ ಪಂಚಾಯತದಲ್ಲಿ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸದಾನಂದ ಅಮರಾಪೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.******************************

Back to top button