ಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ಯುಥ್ ಕಾಂಗ್ರೆಸ್ ಪದಾಧಿಕಾರಿ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿಗೆ ಜಯ ಸಿಗಲಿದೆ: ಸಂಸದೆ ಪ್ರಿಯಂಕಾ ಜಾರಕಿಹೊಳಿ ವಿಶ್ವಾಸ…!!

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಯುಥ್ ಕಾಂಗ್ರೆಸ್ ‌ಪದಾಧಿಕಾರಿಗಳ‌ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿಗೆ ಯುವಕರು ಬೆಂಬಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಚಿಕ್ಕೋಡಿ ಸಂಸದೆ ಪ್ರಿಯಂಕಾ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತ‌‌ನಾಡಿದ ಅವರು, ಯುಥ್ ಕಾಂಗ್ರೆಸ್ ಚುನಾವಣೆಯಲ್ಲಿ ಸಹೋದರ ರಾಹುಲ್ ಜಾರಕಿಹೊಳಿ ಸ್ಪರ್ಧಿಸುತ್ತಿದ್ದಾರೆ. ಎಲ್ಲ ಶಾಸಕರನ್ನು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. ಚುನಾವಣೆ ಪ್ರಕ್ರಿಯೆಯೂ ಆನಲೈನ್ ಮೂಲಕ ಇರುವುದರಿಂದ ಈಗಾಗಲೇ ಯುವಕರಿಗೆ ಫೋನ್ ಮೂಲಕ ಮನವಿ ಮಾಡಿದ್ದೇವೆ. ಸಹೋದರನಿಗೆ ಶುಭವಾಗಲಿ ಎಂದು ಹಾರೈಸಿದರು.

ಇನ್ನು ಚಿಕ್ಕೋಡಿ ಶೈಕ್ಷಣಿಕ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ಡಿಡಿಪಿಐಗಳೊಂದಿಗೆ ಸಭೆ ನಡೆಸಲಾಗಿದೆ. ಇನ್ನೊಂದು‌ ಸಲ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಕಡೆಯಲಾಗುವದು ಎಂದು ಹೇಳಿದರು.*************************

Back to top button