*ಧಾರವಾಡ ಜಿಲ್ಲಾ ಪೊಲೀಸರಿಂದ ಜಪ್ತ ಮಾಡಲಾದ 03 ಪ್ರಕರಣದಲ್ಲಿನ 49 ಕೆ.ಜಿ 950 ಗ್ರಾಂ. ಗಾಂಜಾ ನಾಶ*

ಪ್ರಕೃತಿ ಬೆಳಗಾವಿ ಸುದ್ದಿ : ಧಾರವಾಡ ಜೂ.25: ಅಂತರರಾಷ್ಟ್ರೀಯ ಮಾದಕ ದ್ರವ್ಯ ದಿನಾಚರಣೆ ಪ್ರಯುಕ್ತ ಪ್ರಧಾನ ಕಛೇರಿ ಬೆಂಗಳೂರು ಅವರ ನಿದೇರ್ಶನದಂತೆ ಧಾರವಾಡ ಜಿಲ್ಲೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಜಪ್ತ ಮಾಡಲಾಗಿರುವ ಮಾದಕ ವಸ್ತುಗಳನ್ನು ನಾಶಪಡಿಸುವ ಸಲುವಾಗಿ ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ “ Drug Disposal ’’ ಸಮಿತಿಯ ಅಧಿಕಾರಿಗಳು ಜೂನ್ 17, 2026 ರಂದು ಸಭೆ ನಡೆಸಿ ಚರ್ಚಿಸಿ ತೀರ್ಮಾನಿಸಿದರು.
ಅದರಂತೆ ಇಂದು (ಜೂ.25) ಧಾರವಾಡ ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಗಳಲ್ಲಿ 2025 ಮತ್ತು 2026 ನೇ ಸಾಲಿನಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ಪೈಕಿ 03 ಪ್ರಕರಣಗಳಲ್ಲಿ ಜಪ್ತ ಮಾಡಲಾಗಿರುವ ಗಾಂಜಾ (ಮಾದರಿ ತೆಗೆದಿರಿಸಿದ ಗಾಂಜಾ ಹೊರತುಪಡಿಸಿ) ಒಟ್ಟು ತೂಕ 49 ಕೆಜಿ 950 ಗ್ರಾಂ, ಮಾದಕ ವಸ್ತುವನ್ನು ಧಾರವಾಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಗುಂಜನ್ ಆರ್ಯ, ಧಾರವಾಡ ಗ್ರಾಮೀಣ ಉಪ-ವಿಭಾಗ ಡಿ.ಎಸ್.ಪಿ ವಿನೋಧ ಮುಕ್ತೆದಾರ, ನವಲಗುಂದ ವ್ಲತ್ತದ ಸಿ.ಪಿ.ಐ ರವಿ ಕಪ್ಪತ್ತನವರ ಅವರನ್ನೊಳಗೊಂಡ “Drug Disposal committee” ಅವರ ಸಮಕ್ಷಮ ಮುಖ್ಯಾಧಿಕಾರಿಗಳು ಕರ್ನಾಟಕ ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಅವರ ಸಮ್ಮುಖದಲ್ಲಿ M/s Rio Green India Ltd(CBMWTF) Plot No:126/L Tarihal Industrial area Tq: Hubballi ರವರಲ್ಲಿ ಸುಟ್ಟು ನಾಶ ಪಡಿಸಲಾಯಿತು ಎಂದು ಜಿಲ್ಲಾ ಪೊಲೀಸ್ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.**********************************






