*ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ನಕಲಿ ಪ್ರಮಾಣ ಪತ್ರ ನೀಡುತ್ತಿರುವವರ ವಿರುದ್ದ ಕ್ರಮಕ್ಕೆ ಕರವೇ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ ಆಗ್ರಹ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ನಗರ ವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಕೆಲ ಬೇರೆ ರಾಜ್ಯಗಳಿಂದ ಆಗಮಿಸುತ್ತಿರುವ ವಿದ್ಯಾರ್ಥಿಗಳು ಶೈಕ್ಷಣಿಕ ಪ್ರವೇಶ, ವಸತಿ ಸೌಲಭ್ಯಗಳು, ಸರಕಾರಿ ಹಾಗೂ ಅರೆ ಸರಕಾರಿ ಉದ್ಯೋಗಗಳು ಮತ್ತು ಇತರೆ ಸೌಲಭ್ಯಗಳನ್ನು ಪಡೆಯುವ ಉದ್ದೇಶದಿಂದ ಮಧ್ಯವರ್ತಿಗಳಿಗೆ ದುಡ್ಡು ತೆಗೆದುಕೊಂಡು ನಕಲಿ ರಹವಾಸಿ ಪ್ರಮಾಣ ಪತ್ರಗಳು, ಜಾತಿ ಪ್ರಮಾಣ ಪತ್ರಗಳು ಹಾಗೂ ಇತರೆ ನಕಲಿ ಅರ್ಗಿಮೆಂಟ್ಗಳನ್ನು ನೀಡುತ್ತಿರುವವರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿ ಪೊಲೀಸ್ ಆಯುಕ್ತರಿಗೆ ಭೂಷನ್ ಗುಲಾಭರಾವ್ ಬೊರಸೆ ಅವರಿಗೆ, ಕರವೇ ಜಿಲ್ಲಾ ಅಧ್ಯಕ್ಷ ದೀಪಕ್ ಗುಡಗನಟ್ಟಿ ಮನವಿ ಮಾಡಿಕೊಂಡರು.
ಈ ಅಕ್ರಮ ಚಟುವಟಿಕೆಗಳಿಂದ ಸ್ಥಳೀಯ ಯುವಕರಿಗೆ ತೀವ್ರ ಅನ್ಯಾಯವಾಗುತ್ತಿದ್ದು, ವಿಶೇಷವಾಗಿ ಸರಕಾರಿ ಉದ್ಯೋಗಗಳು ಮತ್ತು ಶೈಕ್ಷಣಿಕ ಅವಕಾಶಗಳು ಕೈ ತಪ್ಪಿ ಹೋಗುತ್ತಿದೆ ಎಂದು ಪೊಲೀಸ್ ಆಯುಕ್ತಿರಿಗೆ ತಿಳಿಸಿದರು.
ಬೇರೆ ರಾಜ್ಯದಿಂದ ಆಗಮಿಸಿದ ವಿಧ್ಯಾರ್ಥಿಗಳಿಗೆ ಹಾಗೂ ಕೆಲ ಕಾರ್ಮಿಕರಿಗೆ ಪೊಲೀಸ್ ದೃಢೀಕರಣ, ವೆರಿಫಿಕೇಷನ್ ಪ್ರಮಾಣ ಪತ್ರ ನೀಡುವ ಸಮಯದಲ್ಲಿ ಸಮರ್ಪಕ ಹಾಗೂ ಕುಲಂಕುಶವಾಗಿ ಅರ್ಜಿದಾರರ ನಿವಾಸ, ದಾಖಲೆಗಳ ಪ್ರಾಮಾಣಿಕತೆ ಹಾಗೂ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಬೇಕೆಂದು ಪೊಲೀಸರ್ ಆಯುಕ್ತರಿಗೆ ದೀಪಕ್ ಗುಡಗನಟ್ಟಿ ಮನವಿ ಮಾಡಿಕೊಂಡರು.
ಜಿಲ್ಲೆಯಲ್ಲಿ ಬೇರೆ ರಾಜ್ಯದಲ್ಲಿನ ವಿಧ್ಯಾರ್ಥಿಗಳಿಗೆ ಹಾಗೂ ಕಾರ್ಮಿಕರಿಗೆ ನಕಲಿ ಪ್ರಮಾಣಪತ್ರಕ್ಕೆ ಕಡಿವಾಣ ಹಾಕಬೇಕು ಮತ್ತು ನಕಲಿ ಪ್ರಮಾಣ ಪತ್ರ ನಿಡುವವರ ವಿರುದ್ದ ಕಾನೂನಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.*******************************






