*ಬೆಳಗಾವಿ ನಗರ ಹಾಗೂ ಗ್ರಾಮೀಣ ಭಾಗಕ್ಕೆ 200 ಹೊಸ ಬಸ್ ಗಳನ್ನು ನೀಡುವಂತೆ ಸಾರಿಗೆ ಸಚಿವರಿಗೆ ಬೇಟಿ ಮಹೇಶ್ ಎಸ್ ಶೀಗಿಹಳ್ಳಿ ರಾಜ್ಯಾದ್ಯಕ್ಷರು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ*

ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ ಗ್ರಾಮೀಣ ಭಾಗಕ್ಕೆ ಹಾಗೂ ನಗರದಲ್ಲಿ ಇರುವ ಬಸ್ ಪ್ರಯಾಣಿಕರಿಗೆ ಬಸ್ ಗಳು ಇಲ್ಲದೆ ತುಂಬಾ ಸಮಸ್ಯೆ ಆಗುತ್ತಿದ್ದು ದಿನನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಸರಿಯಾದ ಸಮಯಕ್ಕೆ ಬಸ್ ಗಳಿಲ್ಲದೆ ಹಾಗೂ ಒಂದು ಗ್ರಾಮಕ್ಕೆ ಒಂದೇ ಬಸ್ ಅದು ದಿನದಲ್ಲಿ ಬರಿ 3 ರಿಂದ 4 ಬಾರಿ ಅದೆ ಬಸ್ ನ್ನು ಓಡಾಡಿಸುವ ಪರಿಸ್ಥಿತಿ ಎದುರಾಗಿದ್ದು ಅದು ಕೂಡ ಬರಿ 30% ಕಂಡೀಶನ್ ಹೊಂದಿರುವ ಬಸ್ ಆಗಿದೆ.
ಈ ಪರಿಸ್ಥಿತಿ ಬೆಳಗಾವಿ ನಗರದಲ್ಲಿ ಬರುವ ಎಲ್ಲಾ ನಗರಗಳಿಗೆ ಓಡಾಡುವ ಬಸ್ ಗಳ ಪರಸ್ಥಿತಿ ಅದೆಯಾಗಿದ್ದು ಪ್ರಯಾಣಿಕರಿಗೆ ದಿನನಿತ್ಯ ಶಾಲಾ ಕಾಲೇಜು ಗೇ ತೆರಳುವ ವಿದ್ಯಾರ್ಥಿಗಳಿಗೆ ತಲೆನೋವಾಗಿ ಪರಿಣಿಮಿಸಿದೆ. ಯಾವುದೆ ಗ್ರಾಮಕ್ಕಾಗಲಿ ಬಸ್ ಪಡೆಯಬೇಕಾದರೆ ಹೋರಾಟ ಮಾಡಿಯೇ ಪಡೆಯಬೇಕಾದ ಸಂಧರ್ಬ ಉಂಟಾಗಿದೆ ಹೋರಾಟ ಮಾಡಿ ಪಡೆದರು ಅದು ಇನ್ನೊಂದು ಗ್ರಾಮದ ಬಸ್ ನ್ನು ಕಸೆದುಕೊಂಡು ಪ್ರಯಾಣಿಸಬೇಕಾದ ಪರಸ್ಥಿತಿ ಉಂಟಾಗಿ ಮತ್ತದೆ ಗ್ರಾಮಕ್ಕೆ ಅದೆ ಸಮಸ್ಯೆ ಉದ್ಭವ ವಾಗುತ್ತಿದೆ.
ಈ ಕಾರಣಕ್ಕಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಬೇಟಿಯಾಗಿ ಕೆಲವು ಗ್ರಾಮಗಳಿಗೆ ನಗರಗಳಿಗೆ ಬಸ್ ಗಳನ್ನು ಬಿಡುವಂತೆ ಹೇಳಿ ಬಸ್ ಗಳನ್ನು ಅದಿಕಾರಿಗಳು ಬಿಟ್ಟರು ಸಹ ಮತ್ತದೆ ಇನ್ನುಳಿದ ಗ್ರಾಮ ನಗರದಲ್ಲಿ ಮತ್ತದೆ ಸಮಸ್ಯೆಗಳು ಉದ್ಭವ ವಾಗುತ್ತಿದೆ.
ಈ ಸಮಸ್ಯೆ ಒಳಗೊಂಡು ಅಧಿಕಾರಿಗಳಿಗೆ ಬೇಟಿಯಾಗಿ ಯಾಕೆ ಈ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಕೇಳಿದಾಗ ಬೆಳಗಾವಿ ಯಲ್ಲಿ ಹೊಸ ಬಸ್ ಗಳೆ ಇಲ್ಲ ಹಾಗೂ ಹಳೆ ಬಸ್ ಗಳಲ್ಲಿ ಅದರಲ್ಲೂ ಬರಿ 30 % ರಿಂದ 40% ಅಷ್ಟೇ ಕಂಡೀಶನ್ ನಲ್ಲಿ ಬಸ್ ಗಳು ಓಡಾಡುತ್ತಿದ್ದು ಬೆಳಗಾವಿಗೆ ಹೊಸ 200 ಕ್ಕಿಂತ ಹೆಚ್ಚು ಹೊಸ ಬಸ್ ಗಳ ಅವಶ್ಯಕತೆ ಇದೆ ಎಂದು ತಿಳಿದಿದ್ದರಿಂದ ಸಾರಿಗೆ ಸಚಿವರಿಗೆ ಸಂದೇಶದ ಮುಖಾಂತರ ಬೆಳಗಾವಿಗೆ ಬಸ್ ಗಳ ಬೇಡಿಕೆ ಬಗ್ಗೆ ತಿಳಿಸಿದ್ದರಿಂದ ಮಾನ್ಯ ಸಚಿವರು ಸ್ಪಂದಿಸಿ ಆದಷ್ಟು ಬೇಗ ಬಸ್ ನೀಡುವುದರ ಬಗ್ಗೆ ಗ್ರೀನ್ ಸಿಗ್ನಲ ನೀಡಿದ್ದು ಸಂತೋಷದ ವಿಚಾರ ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಾನ್ಯ ಸಾರಿಗೆ ಸಚಿವರಿಗೆ ಬೇಟಿ ಮಾಡಿ ಬೆಳಗಾವಿಗೆ ಹೊಸ 200 ಬಸ್ ಗಳ ಬಗ್ಗೆ ಮಾತನಾಡಲಾಯಿತು.
ಈ ವಿಚಾರಕ್ಕೆ ಸ್ಪಂದಿಸಿದ ಸಚಿವರು ಬಸ್ ಗಳನ್ನು ನೀಡುವ ಬರವಸೆ ನೀಡಿದ್ದಾರೆ. ಎಂದು ಮಹೇಶ್ ಎಸ್ ಶೀಗಿಹಳ್ಳಿ ರಾಜ್ಯಾದ್ಯಕ್ಷರು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕ ರವರು ತಿಳಿಸಿದ್ದಾರೆ.*********************************






