ಕ್ರೀಡೆಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ರಾಜ್ಯ ಸರಕಾರದಿಂದ ಹಳ್ಳಿ ಹಳ್ಳಿಗೆ ಅಭಿವೃದ್ಧಿ ಕಾರ್ಯಕ್ರಮ – ಚನ್ನರಾಜ ಹಟ್ಟಿಹೊಳಿ…!!

ಕರಂಬಳ ಗ್ರಾಮದಲ್ಲಿ ಪೇವರ್ಸ್ ಅಳವಡಿಕೆ ಕಾಮಗಾರಿಗೆ ಚಾಲನೆ…

ಪ್ರಕೃತಿ ಬೆಳಗಾವಿ ಸುದ್ದಿ : ಖಾನಾಪುರ : ಖಾನಾಪುರ ತಾಲೂಕಿನ ಕರಂಬಳ ಗ್ರಾಮದಲ್ಲಿ ಹನುಮಾನ ದೇವಸ್ಥಾನದಿಂದ ಹೋಳಿ ಚವಾಟ್ ಗುಡಿಯವರೆಗೆ ಪೇವರ್ಸ್ ಅಳವಡಿಕೆ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಂಗಳವಾರ ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಹಳ್ಳಿಯ ಮೂಲಭೂತ ಸೌಲಭ್ಯ ಅಭಿವೃದ್ಧಿಯಾದಾಗ ಮಾತ್ರ ಅಭಿವೃದ್ಧಿ ಎನ್ನುವ ಶಬ್ದಕ್ಕೆ ಅರ್ಥ ಬರುತ್ತದೆ. ಹಾಗಾಗಿ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನೂ ಹಳ್ಳಿ ಹಳ್ಳಿಗೆ ತರುತ್ತಿದೆ. ಜನರ ಸಹಕಾರ ಇದ್ದಾಗ ಮಾತ್ರ ಸರಕಾರ ಹಾಗೂ ಜನಪ್ರತಿನಿಧಿಗಳು ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಈ ವೇಳೆ ರಾಜಾರಾಮ ಪಾಟೀಲ, ನಾರಾಯಣ ಪಾಟೀಲ, ರಾಜಶ್ರೀ ಮಾದರ್, ಲಕ್ಷ್ಮೀ ಪಾಟೀಲ, ಪ್ರಗತಿ ಗೊಂದಳಿ, ನಾರಾಯಣ ಪಾಟೀಲ, ವಿನಾಯಕ ಮೊದಗೇಕರ್ ಸೇರಿದಂತೆ ಅನೇಕ ಮುಖಂಡರು, ಮಹಿಳೆಯರು ಉಪಸ್ಥಿತರಿದ್ದರು.**********************

Back to top button