ಕ್ರೀಡೆಪ್ರಕೃತಿ ಬೆಳಗಾವಿಬೆಳಗಾವಿರಾಜಕೀಯರಾಜ್ಯ

ಶತಾಯುಷಿ ಗಂಗಪ್ಪ ವಾಲಿ ಇಟಗಿ ಅವರ ಅಂತಿಮ ದರ್ಶನ ಪಡೆದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್…!!

ಪ್ರಕೃತಿ ಬೆಳಗಾವಿ ಸುದ್ದಿ : ಹಿರೇಬಾಗೇವಾಡಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶತಾಯುಷಿ ಗಂಗಪ್ಪ ವಾಲಿ ಇಟಗಿ ಅವರ ಅಂತಿಮ ದರ್ಶನ ಪಡೆದರು. ಶತಾಯುಷಿ, ಹಿರೇಬಾಗೇವಾಡಿ ಗ್ರಾಮದ ಹಿರಿಯರಾಗಿದ್ದ ಗಂಗಪ್ಪ ವಾಲಿ ಇಟಗಿ ಅವರು ವಯೋಸಹಜ ಕಾಯಿಲೆಯಿಂದ ನಿಧನರಾದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೃತರ ಮನೆಗೆ ತೆರಳಿ ಮೃತ ಗಂಗಪ್ಪ ವಾಲಿಇಟಗಿ ಅವರ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ವೇಳೆ ಹಿರೇಬಾಗೇವಾಡಿ ಗ್ರಾಮಸ್ಥರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.*********************

Back to top button