
ಕಿತ್ತೂರು ಉತ್ಸವದ ಮುನ್ನುಡಿ ಕಾರ್ಯಕ್ರಮ…
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ.ಅ.22 : ಕಿತ್ತೂರ ರಾಣಿ ಚನ್ನಮ್ಮನ 200ನೇ ವರ್ಷದ ವಿಜಯೋತ್ಸವ, ಕಿತ್ತೂರಿನ ಇತಿಹಾಸವನ್ನು ಬೆಳಗಾವಿ ಸೇರಿದಂತೆ ನಾಡಿನಾದ್ಯಂತ ಪಸರಿಸುವ ನಿಟ್ಟಿನಲ್ಲಿ ಕಿತ್ತೂರು ಉತ್ಸವದ ಮುನ್ನುಡಿ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ನುಡಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ (ಅ.21) ಜರುಗಿದ ಕಿತ್ತೂರು ಉತ್ಸವ-2024 ಮುನ್ನುಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಿತ್ತೂರು ಉತ್ಸವದ ಪ್ರಯುಕ್ತ ಬೆಳಗಾವಿಯಲ್ಲಿ ಇದೇ ಮೊದಲಬಾರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಕಿತ್ತೂರಿನ ಹೊರಾಟದಲ್ಲಿ ಭಾಗವಹಿಸಿದ ಮಹನಿಯರ ಇತಿಹಾಸ ಬೆಳಗಾವಿ ಸೇರಿದಂತೆ ನಾಡಿನೆಲ್ಲಡೆ ಪಸರಿಸುವದು ಈ ಕಾರ್ಯಕ್ರಮದವಮುಖ್ಯ ಉದ್ದೇಶವಾಗಿದೆ.
ಕಿತ್ತೂರಿನ ವೈಭವವನ್ನು ಪ್ರಪಂಚದಾದ್ಯಂತ ಹರಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ಮೂಲಕ ಕಿತ್ತೂರಿನ ಗತವೈಭವ ನಾಡಿನಾದ್ಯಂತ ಪಸರಿಸಲಿ ಎಂದು ಆಶಯ ವ್ಯಕ್ತ ಪಡಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ ನಮ್ಮ ದೇಶದ ಮಿನುಗು ತಾರೆ, ಮಹಿಳೆಯರ ಶಕ್ತಿಯಾದಂತಹ ಚನ್ನಮ್ಮನ ವಿಜಯೋತ್ಸವ ನಮ್ಮೆಲ್ಲರ ಹೆಮ್ಮೆಯ ಕಾರ್ಯಕ್ರಮ ಇದಾಗಿದೆ ಎಂದರು.
ಭಾರತ ದೇಶದಲ್ಲಿ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಕಿಚ್ಚು ಹಚ್ಚಿದ ಮೊದಲ ಮಹಿಳೆ ರಾಣಿ ಚನ್ನಮ್ಮ ಆಗಿದ್ದು. ಉತ್ತರ ಕರ್ನಾಟಕ ಭಾಗದ ಜನರಿಗೆ ಕಿತ್ತೂರು ರಾಣಿ ಚನ್ನಮ್ಮನ ಉತ್ಸವ ಅತ್ಯಂತ ಮಹತ್ವದಾಗಿದೆ. ರಾಣಿ ಚನ್ನಮ್ಮನ ಉತ್ಸವ ನಮ್ಮೆಲ್ಲರ ಉತ್ಸವವಾಗಿದ್ದು, ಕಿತ್ತೂರಿನಲ್ಲಿ ಮೂರು ದಿನಗಳ ಕಾಲ ಜರುಗುವ ರಾಣಿ ಚನ್ನಮ್ಮಳ 200ನೇ ವರ್ಷದ ವಿಜಯೋತ್ಸವದ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ರಾಣಿಚನ್ನಮ್ಮಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ಶಾಸಕರಾದ ರಾಜು(ಆಸೀಫ್) ಸೇಠ ಅವರು ಮಾತನಾಡಿ, ರಾಣಿ ಚನ್ನಮ್ಮನ ವಿಜಯೋತ್ಸವ ದ 200 ವರ್ಷದ ಕಾರ್ಯಕ್ರಮ ಬೆಳಗಾವಿ ನಗರದಲ್ಲಿ ಆಯೋಜಿಸಿರುವುದು ಸಂತಸದಾಯಕ ಸಂಗತಿಯಾಗಿದ್ದು. ಈ ಮೂಲಕ ರಾಣಿ ಚನ್ನಮ್ಮನ ಇತಿಹಾಸ ಸಾರುವ ಕಾರ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಾಬಸಾಹೇಬ ಪಾಟೀಲ, ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹಾಪೌರರಾದ ಸವಿತಾ ಕಾಂಬಳೆ ಉಪ ಮಹಾಪೌರ ಆನಂದ ಚವ್ಹಾಣ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜಿಲ್ಲಾಪೋಲಿಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಜಿ.ಪಂ. ಸಿ.ಇ.ಓ ರಾಹುಲ್ ಶಿಂಧೆ, ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೆಶಕಿ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.*********************