
ಪ್ರಕೃತಿ ಬೆಳಗಾವಿ ಸುದ್ದಿ : ಬೆಳಗಾವಿ : ಕರ್ನಾಟಕ ರಾಜ್ಯೋತ್ಸವವನ್ನು ವಿರೋದಿಸಿ ಎಮ್ಈಇಸ್ ಕೆಲವು ಕಿಡಿಗೇಡಿಗಳು ಹಲವು ವರ್ಷಗಳಿಂದ ಕರಾಳ ದಿನಾಚರಣೆ ಆಚರಿಸಿ ಕನ್ನಡಿಗರ ವಿರುದ್ಧ ಪುಂಡತನ ಮೆರೆಯುತಿದ್ದರು ಮತ್ತು ಕನ್ನಡಿಗರಿಗೆ ಅವಮಾನ ಮಾಡುವ ಪ್ರಯತ್ನ ಮಾಡುತಿದ್ದರು. ಕನ್ನಡಿಗರ ಸ್ವಾಭಿಮಾನಕ್ಕೆ ದಕ್ಕೆ ಮಾಡುವ ಪ್ರಯತ್ನ ನಿರಂತರವಾಗಿ ನಡೆಯುತಿತ್ತು. ಆದರೆ ಬೆಳಗಾವಿಗೆ ಬಂದಂತಹ ಕೆಲವು ಜಿಲ್ಲಾಧಿಕಾರಿಗಳು ಕರಾಳ ದಿನಾಚರಣೆ ತಡೆಯುವ ಪ್ರಯತ್ನ ಮಾಡಿದರು ಯಶಸ್ವಿಯಾಗಲಿಲ್ಲ .
ಆದರೆ ಬೆಳಗಾವಿಗೆ ಬಂದ ಯಂಗ್ ಅಂಡ್ ಡೈನಮಿಕ್ ಜಿಲ್ಲಾಧಿಕಾರಿಗಳು ಉತ್ತಮವಾದ ನಿಲುವು ತಗೆದುಕೊಂಡು ಕರಾಳ ದಿನಾಚರಣೆ ಅನುಮತಿಗೆ ಬಂದಂತಹ M.E.S ಮುಖಂಡರಿಗೆ ಮಾತಿನ ಚಾಟಿಯ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳು ಕರಾಳ ದಿನಾಚರಣೆಗೆ ಅವಕಾಶವಿಲ್ಲ ಎಂದು ಹೇಳಿ ಕನ್ನಡ ನೆಲದ ಪರವಾಗಿ ನಿಂತು ಉತ್ತಮವಾದ ನಿಲುವು ವ್ಯಕ್ತಪಡಿಸಿದ್ದಾರೆ . ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ರವರಿಗೆ ಕನ್ನಡಿಗರ ಪರವಾಗಿ ಅಭಿನಂದನೆಗಳನ್ನು ಯುವ ಹೋರಾಟಗಾರ ಮಹೇಶ ಎಸ್ ಶಿಗೀಹಳ್ಳಿ ರವರು ತಿಳಿಸಿದ್ದಾರೆ.************************